ಇದೇ ಮೊದಲು.. ತೆರಿಗೆ ಪಾವತಿಸುವಂತೆ ಪ್ರೇಮಸೌಧ ತಾಜ್‍ಮಹಲ್‍ಗೆ ನೋಟಿಸ್…

69
firstsuddi

ಲಕ್ನೋ : ವಿಶ್ವದ ಅದ್ಭುತಗಳಲ್ಲಿ ಒಂದಾದ ಪ್ರೇಮಸೌಧ ತಾಜ್‍ಮಹಲ್‍ಗೆ ಇದೇ ಮೊದಲ ಸಲ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.

ಆಗ್ರಾ ಮುನ್ಸಿಪಾಲ್ ಕಾರ್ಪೊರೇಷನ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ನೀಡಿದೆ. ಅದೂ ಕೂಡ ಬರೊಬ್ಬರಿ 1.5 ಲಕ್ಷ ಆಸ್ತಿ ತೆರಿಗೆ ಮತ್ತು 1.9 ಕೋಟಿ ರೂ ನೀರಿನ ತೆರಿಗೆ ಅನ್ನು ಕೂಡಲೇ ಪಾವತಿಸುವಂತೆ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ಜನವರಿ 15ರೊಳಗೆ ಬಾಕಿ ಪಾವತಿಸದಿದ್ದರೆ ತಾಜ್ ಮಹಲ್ ಸೀಜ್‌ ಮಾಡುವುದಾಗಿ ಪುರಸಭೆ ಅಧಿಕಾರಿಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ತಾಜ್ ಮಹಲ್ ಕಲಾತ್ಮಕ ಹಾಗೂ ಐತಿಹಾಸಿಕ ಕಟ್ಟಡವಾಗಿದ್ದು, ಇದಕ್ಕೆ ಮನೆ ತೆರಿಗೆ ಕಟ್ಟುವುದೇನು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ರೀತಿಯ ನೋಟಿಸ್ ಬರುತ್ತಿರುವುದು ಇದೇ ಮೊದಲು ಎಂದು ಹೇಳಿರುವ ಪುರಾತತ್ವ ಇಲಾಖೆ ಅಧಿಕಾರಿಗಳು, ಈ ಕುರಿತ ಗೊಂದಲಗಳನ್ನು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.