ನವದೆಹಲಿ: ಶೀಘ್ರದಲ್ಲೇ ದೇಶೀಯ ಎಲ್ ಪಿಜಿ ಸಿಲಿಂಡರ್ ಗಳಿಗೆ ಕ್ಯೂಆರ್ ಕೋಡ್ ಅಳವಡಿಸಲಾಗುವುದು ಎಂದು ಕೇಂದ್ರ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಈ ಕ್ಯೂಆರ್ ಕೋಡ್ ಅನ್ನು ಸಿಲಿಂಡರ್ ಗಳ ಮೇಲೆ ಅಂಟಿಸಲಾಗುತ್ತದೆ. ಇದು ಗ್ಯಾಸ್ ಸಿಲಿಂಡರ್ ಗಳ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್ ಮಾಡುತ್ತದೆ. ಜೊತೆಗೆ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಉತ್ತಮ ದಾಸ್ತಾನು ನಿರ್ವಹಣೆಗೆ ಕ್ಯೂಆರ್ ಕೋಡ್ ತಂತ್ರಜ್ಞಾನ ನೆರವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಸಚಿವರು ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ‘ವಿಶ್ವ ಎಲ್ ಪಿಜಿ ವಾರ 2022’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಪುರಿ ಅಧಿಕಾರಿಗಳ ಜತೆ ಕ್ಯುಆರ್ ಕೋಡ್ ತಂತ್ರಜ್ಞಾನ ವಿಚಾರವಾಗಿ ಚರ್ಚಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ವಸ್ತುವಿನ ಕುರಿತ ವಿವರಗಳು ಹಾಗೂ ವಿಸ್ತೃತ ಮಾಹಿತಿಯನ್ನೂ ಕ್ಯುಆರ್ ಕೋಡ್ ಮೂಲಕ ತಿಳಿಯಬಹುದಾಗಿದೆ.
Fueling Traceability!
A remarkable innovation – this QR Code will be pasted on existing cylinders & welded on new ones – when activated it has the potential to resolve several existing issues of pilferage, tracking & tracing & better inventory management of gas cylinders. pic.twitter.com/7y4Ymsk39K— Hardeep Singh Puri (@HardeepSPuri) November 16, 2022










