ಮುಂಬೈ: ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ಸದ್ಯ ಮಹಾರಾಷ್ಟ್ರ ತಲುಪಿದೆ. ನಿನ್ನೆ ನಡೆದ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಯ ಬದಲಿಗೆ ತಪ್ಪಾದ ಹಾಡಿನ ವಿಡಿಯೋವನ್ನು ಪ್ಲೇ ಮಾಡಲಾಗಿದ್ದು, ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಡಿಯೋದಲ್ಲೇನಿದೆ? : ವಾಶಿಮ್ ನಲ್ಲಿ ರಾಹುಲ್ ಗಾಂಧಿಯವರ ಭಾಷಣದ ಕೊನೆಯಲ್ಲಿ ಈಗ ರಾಷ್ಟ್ರಗೀತೆಯನ್ನು ಪ್ಲೇ ಮಾಡಲಾಗುವುದು ಎಂದು ಘೋಷಣೆ ಮಾಡಲಾಯಿತು. ಅದನ್ನು ರಾಹುಲ್ ಗಾಂಧಿಯವರು ಕೂಡ ಮೈಕ್ ನಲ್ಲಿ ಹೇಳಿದರು. ಆಗ ವೇದಿಕೆಯಲ್ಲಿದ್ದ ಕಾಂಗ್ರೆಸ್ ಮುಖಂಡರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಲು ಸಿದ್ಧರಾದರು. ಆದರೆ, ತಂತ್ರಜ್ಞರ ತಪ್ಪಿನಿಂದಾಗಿ ಕೆಲವು ಸೆಕೆಂಡುಗಳ ಕಾಲ ಬೇರೆ ಮ್ಯೂಸಿಕ್ ಹಾಕಲಾಯಿತು. ಆಗ ರಾಹುಲ್ ಗಾಂಧಿ ಅಲ್ಲಿದ್ದ ಸ್ಥಳೀಯ ನಾಯಕರಿಗೆ ಸನ್ನೆ ಮಾಡಿ ರಾಷ್ಟ್ರಗೀತೆಯ ಬದಲು ಬೇರೆ ಸಂಗೀತವನ್ನು ಹಾಕಿದ್ದೀರಲ್ಲ ಎಂದು ಪ್ರಶ್ನಿಸಿದರು. ಆ ನಂತರ ಜನ ಗಣ ಮನ ಮ್ಯೂಸಿಕ್ ಪ್ಲೇ ಮಾಡಲಾಯಿತು.
ತಮಿಳುನಾಡು ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, “ಇದೇನಿದು ರಾಹುಲ್ ಗಾಂಧಿ” ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Sh. @RahulGandhi, what is this?pic.twitter.com/LAabKCOzqP
— Amar Prasad Reddy (@amarprasadreddy) November 16, 2022










