ಚಿಕ್ಕಮಗಳೂರು : ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ಎನ್.ಆರ್.ಪುರ ತಾಲೂಕಿನ ಮೆಣಸೂರಿನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳಿರುವ ಹೇಳಿಕೆಯ ಆಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಗೋವಾದಿಂದ ನಾವು 2 ವಿಸ್ಕಿ ಬಾಟಲ್ ತರಲು ಸಾಧ್ಯವಿಲ್ಲ ಆದರೆ ಪಾಕಿಸ್ತಾನದವರು ಭದ್ರತೆ ಇದ್ದರೂ ಕಾರಿನಲ್ಲಿ 350 ಕೆ.ಜಿ. ಸ್ಪೋಟಕವನ್ನು ತಂದು ದಾಳಿ ಮಾಡಿದ್ದಾರೆ. ಇಮ್ರಾನ್ ಖಾನ್ ಅವರು ಸೌಮ್ಯ, ಸಜ್ಜನ ಸ್ವಭಾವ ಹೊಂದಿದವರು. ಹೀಗಾಗಿ ಅಭಿನಂದನ್ ಅವರನ್ನು ಗೌರವದಿಂದ ಕಳುಹಿಸಿಕೊಟ್ಟಿದ್ದಾರೆ ಅದು ಅವರ ಸೌಜನ್ಯ ಸ್ವಭಾವವನ್ನು ತೋರಿಸುತ್ತದೆ ಎಂದು ಹೇಳಿಕೆ ನೀಡಿರುವ ಆಡಿಯೋ ವೈರಲ್ ಆಗಿದೆ.










