ಜೆರುಸಲೇಂ : ಇಸ್ರೇಲ್ ಗೆ ವಲಸೆ ಹೋಗಿದ್ದ ಭಾರತೀಯ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಇಸ್ರೇಲ್ ನ ಕ್ರಿಯಾತ್ ಶ್ಮೋನಾ ಎಂಬ ನಗರದಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕನನ್ನು ಯೋಯೆಲ್ ಲೆಹಿಂಗಾಹೆಲ್ (18) ಎಂದು ಗುರುತಿಸಲಾಗಿದೆ.
ಒಂದು ವರ್ಷದ ಹಿಂದೆ ತನ್ನ ಕುಟುಂಬದೊಂದಿಗೆ ಇಸ್ರೇಲ್ ಗೆ ವಲಸೆ ಹೋಗಿದ್ದ ಎಂದು ವರದಿಯಾಗಿದೆ. ಯೋಯೆಲ್ ಲೆಹಿಂಗಾಹೆಲ್ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದನು. 20ಕ್ಕೂ ಹೆಚ್ಚು ಮಂದಿ ಯುವಕರಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಲಾಟೆ ನಡೆದಿದೆ.
ನಿನ್ನೆ ಮುಂಜಾನೆ 7 ಗಂಟೆ ಸುಮಾರಿಗೆ ಮೃತ ಯುವಕನ ಸ್ನೇಹಿತರೊಬ್ಬರು ಕುಟುಂಬಕ್ಕೆ ಕರೆ ಮಾಡಿ ಕಳೆದ ರಾತ್ರಿ ಜಗಳವಾಗಿತ್ತು ಮತ್ತು ಯೋಯೆಲ್ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿಸಿದ್ದರು. ಆದರೆ, ಕುಟುಂಬವು ಆಸ್ಪತ್ರೆಗೆ ತಲುಪುವ ಮುಂಚೆಯೇ ಯೋಯೆಲ್ ನಿಧನರಾಗಿದ್ದರು ಎಂಬುದಾಗಿ ಯಹೂದಿ ಸಮುದಾಯದ ಜತೆ ಕೆಲಸ ಮಾಡುತ್ತಿರುವ ಮೀರ್ ಪಲ್ಟಿಯೆಲ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು 13 ರಿಂದ 15 ವರ್ಷದೊಳಗಿನ 7 ಮಂದಿಯನ್ನು ಬಂಧಿಸಿದ್ದಾರೆ.










