ಶ್ರೀಹರಿಕೋಟ : ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಕಾರ್ಟೋಸ್ಯಾಟ್ 3 ಹಾಗೂ ಅಮೆರಿಕದ 13 ವಾಣಿಜ್ಯ ಬಳಕೆಯ ನ್ಯಾನೋ ಉಪಗ್ರಹಗಳನ್ನು ಹೊತ್ತೊಯ್ಯವ ಪಿಎಸ್ಎಲ್ವಿ-ಸಿ47 ರಾಕೆಟ್ನ್ನು ಇಂದು ಬೆಳಿಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಇಂದು ಬೆಳಿಗ್ಗೆ 9:28ಕ್ಕೆ ರಾಕೆಟ್ ಮೂಲಕ 714 ಕೆ.ಜಿ ತೂಕದ ಕಾರ್ಟೋಸ್ಯಾಟ್-3 ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ.










