ಈದ್ ಮುಬಾರಕ್…

425

ಡಾ.ಅಲ್ ಹಾಫಿಝ್ ಅಬ್ದುಲ್ ಮಜೀದ್.

ಮುಸ್ಲಿಂ ಸಹೋದರ ಸಹೋದರಿಯರು ಈಗ ಈದ್ ಹಬ್ಬ ಆಚರಿಸುವ ತವಕದಲ್ಲಿದ್ದಾರೆ. ಇಸ್ಲಾಮಿನಲ್ಲಿರುವುದು ಎರೆಡೇ ಎರೆಡು ಹಬ್ಬ ಒಂದು ಈದುಲ್ ಫಿತ್ರ್. ಇದು ರಂಝಾನಿನ ಉಪವಾಸ ಕೊನೆಗೊಂಡ ನಂತರ ಬರುವ ಹಬ್ಬವಾದರೆ ಫಿತ್ರ್ ಝಕಾತನ್ನು(ಠಿeಡಿsoಟಿಚಿಟ ಣಚಿx) ಪಾವತಿಸಿ ಆಚರಿಸುವ ಹಬ್ಬವಾದ ಕಾರಣದಿಂದ ಇದನ್ನು ಈದುಲ್ ಫಿತ್ರ್ ಎಂದೂ ಕರೆಯಲಾಗಿದೆ. ಇನ್ನೊಂದು ಹಬ್ಬವಾಗಿದೆ ಬಕ್ರೀದ್,ಈದುಲ್ ಫಿತ್ರ್ನ ದಿವಸ ನೆರೆಹೊರೆಯವರಾಗಲಿ ಸಂಭಂಧಿಕರಾಗಲಿ ಯಾರೂ ಹಸಿದಿರಬಾರದು ಎಂಬ ಉದ್ದೇಶದಿಂದ ಫಿತೃ ಝಕಾತನ್ನು ವಿತರಿಸಲಾಗುತ್ತದೆ,ಆದರೆ ಇಂದು ಈ ಈದ್ ಹಬ್ಬವು ಇಸ್ಲಾಮಿನ ಸಂಸ್ಕøತಿಯನ್ನು ಮೀರಿ ಆಚರಿಸಲಾಗುತ್ತಿದೆ, ಪಟಾಕಿ ಸುಡು ಮದ್ದುಗಳಿಗೆ, ತಳಿರು ತೋರನಗಳಿಗೆ ಇನ್ನಿತರ ಯಾವುದೇ ಆಡಂಬರ ಪ್ರದರ್ಶನಗಳಿಗೆ ಇಸ್ಲಾಮಿನ ಈ ಎರೆಡು ಹಬ್ಬಗಳಳ್ಳಿ ಅವಕಾಶವಿಲ್ಲ, ಇದು ಅತ್ಯಂತ ಸರಳ ಮತ್ತು ಸುಂದರವಾದ ಹಬ್ಬವಾಗಿದೆ, ತನ್ನ ಸಾಮಥ್ರ್ಯಕ್ಕನುಸಾರವಾಗಿ ಬಟ್ಟೆ ಬರೆಗಳನ್ನು ಖರೀದಿಸಿ ಅದನ್ನು ಹಬ್ಬದ ದಿನ ಧರಿಸಿ ಸಂಭ್ರಮಿಸುವುದಕ್ಕೆ ಇಸ್ಲಾಮಿನಲ್ಲಿ ಅವಕಾಶವಿದೆ.ಆದರೆ ಹದ್ದುಮೀರಿದ ಆಡಂಬರದ ಪ್ರದರ್ಶನವನ್ನು ಪ್ರವಾದಿ (ಸ.ಅ) ರವರು ವಿರೋಧಿಸಿರುವರು, ಮಾತ್ರವಲ್ಲ ದುಂದುಗಾರಿಕೆಯು ಪಿಶಾಚಿನ ದಾರಿ ಎಂದು ಖುರಾನ್ ಹೇಳುತ್ತದೆ, ಇಂತಹ ದುಂದುಗಾರಿಕೆಗೆ ಬಳಸುವ ಹಣವನ್ನು ಸಮುದಾಯದ ಕಣ್ಣೀರೊರೆಸುವುದಕ್ಕೆ ಬಳಸುವುದಾದರೆ ಈ ಹಬ್ಬ ಮತ್ತಷ್ಟು ಸಾರ್ಥಕ, ನಮ್ಮ ಹಬ್ಬದಲ್ಲಿ ನಮ್ಮ ಸಹಜೀವಿಗಳನ್ನು ಕಡೆಗಣಿಸದೆ ಅವರನ್ನು ಈ ಸಂಭ್ರಮದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು, ಅನ್ಯ ಮತೇಯರಿಗೆ ಇಸ್ಲಾಮಿನ ಸುಂದರ ಸಂದೇಶವನ್ನು ತಲುಪಿಸಲು ಈಹಬ್ಬವು ಸಹಾಯಕವಾಗಬೇಕು, ಮತೀಯ ಸೌಹಾರ್ದತೆಯಿಂದಲೇ ಭವ್ಯ ಭಾರತದ ವಿಮೋಚನೆ ಕೋಮುಸಾಮರಸ್ಯ ಸೃಷ್ಟಿಸುವ ಮೂಲಕ ಕೋಮುವಾದಿಗಳಿಗೆ ಕೊಡಲಿ ಏಟು ನೀಡಬೇಕು, ದುಂದುಗಾರಿಕೆ ಇಲ್ಲದಂತಹ ಉತ್ತಮ ಆಹಾರ ಪದಾರ್ಥಗಳನ್ನು ಮಾಡಿ ನೆರೆಕರೆಯವರಿಗು ಬಡಬಗ್ಗರಿಗೂ ಉಣಿಸಿ ತಾನು ಉಂಡು ಸಂತಸ ಪಡುವುದು ಪ್ರೋತ್ಸಾಹನಿಯವಾಗಿದೆ, ಹಬ್ಬದ ದಿನ ಯುವಕರು ಗುಂಪುಗಂಪಾಗಿ ಸಿನಿಮಾ ತಿಯೆಟರ್‍ಗೆ ಬಾರ್ಗಳಿಗೆ ಹೋಗಿ ಒಂದು ತಿಂಗಳು ಕಷ್ಟಪಟ್ಟು ಸಂಪಾದಿಸಿದ ಪುಣ್ಯವನ್ನು ಆತ್ಮೀಯ ಚೇತನವನ್ನು ಒಂದೇ ದಿನದಲ್ಲಿ ನಷ್ಟಗೊಳಸಬಾರದು, ರೆಸಾರ್ಟ್‍ಗಳಿಗೆ ಅಥವಾ ಪಾರ್ಕ್‍ಗಳಿಗೆ ಹೋಗಿ ಸಮಯ ಕಳೆಯುದಕ್ಕಿಂತ ಮನೆಯಲ್ಲಿ ಮಡದಿ ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮವನ್ನು ಏರ್ಪಡಿಸಿ ಪ್ರವಾದಿ ಕಥೆ ಅಥವಾ ಹಾಡು ಇಂತಹ ಉತ್ತಮ ಧಾರ್ಮಿಕ ಉಪನ್ಯಾಸಗಳ£ ಸೀಡಿಗಳನ್ನಿಟ್ಟು ಮನೆಯಲ್ಲೇ ಇದ್ದುಕೊಂಡು  ಸಂಭ್ರಮ ಆಚರಿಸುಬಹುದು. ಹಬ್ಬದ ದಿನದಂದು ಸಂಭಂಧಗಳನ್ನು ಸುದಾರಿಸಲು ಒಳ್ಳೆಯ ಅವಕಾಶವಾಗಿ ಕೌಟುಂಬಿಕ ಸಂಭಂಧಗಳು ಸಿಥಿಲಗೊಂಡಿರುವ ಈ ಕಾಲದಲ್ಲಿ ಅದನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಸಂಭಂದಿಕರ ಮನೆಗಳಿಗೆ ಭೇಟಿ ನೀಡಬೇಕು, ಕುಟುಂಬ ಸಂಭಂದಗಳನ್ನು ಸುದಾರಿಸಿಕೊಳ್ಳುವ ಪ್ರಾರ್ಥನೆಗಳು ಸ್ವೀಕರಿಸಲ್ಪಡುವುದು, ಕುಟುಂಬ ಸಂಭಂದವನ್ನು ಮುರಿಯುವುದರ ಮೇಲೆ ಅಲ್ಲಾಹನ ಕೋಪವಿದೆ ಶಾಪವಿದೆ, ಆದುದರಿಂದ ಈ ದಿನವು ನಮಗೆ ಕುಟುಂಬ ಸಂಭಂಧವನ್ನು ಸುಭದ್ರಗೋಳಿಸಲು ಸಹಾಯಕವಾಗಲಿ, ಬಂಧು ಮಿತ್ರಾದಿಗಳನ್ನು ಮನೆಗೆ ಕರೆದು ಅಥವಾ ಅವರ ಮನೆಗೆ ಭೇಟಿ ನೀಡಬೇಕು, ಅದೇರೀತಿ ಅನ್ಯಧರ್ಮೀಯರಿಗೆ ಇಸ್ಲಾಮಿನ ಸುಂದರ ಸಂದೇಶವನ್ನು ನೀಡುವ ಒಂದು ದಿನವನ್ನಾಗಿ ನಾವು ಈ ಈದನ್ನು ಮಾರ್ಪಡಿಸಬೇಕು, ಇತರ ಧರ್ಮೀಯರಿಗೆ ಪೆರುನ್ನಾಳಿನ ಪ್ರತ್ಯೇಕ ಆಹಾರ,ತಿಂಡಿ, ತಿನಿಸುಗಳನ್ನು ಹಂಚಿ ಗೌರವಿಸಬೇಕು.

ಅನ್ಯ ಧರ್ಮೀಯರಿಗೆ ಈದ್ ಸಂದೇಶ:-
ಹಿಂದೂಗಳು ಮತ್ತು ಮುಸ್ಲಿಮರು ಸಾವಿರ ವರ್ಷಗಳಿಂದ ಭಾರತದಲ್ಲಿ ಸಹಜೀವನ ನಡೆಸುತ್ತಾ ಬಂದರೂ ಇದುವರೆಗು ಪರಸ್ಪರ ಅರಿಯಲು ಸಾಧ್ಯವಾಗಲಿಲ್ಲ, ಹಿಂಧೂವಿನ ಪಾಲಿಗೆ ಮುಸ್ಲಿಂ ರಹಸ್ಯವಾಗಿರುವಂತೆ ಮುಸ್ಲಿಮರ ಪಾಲಿಗೆ ಹಿಂದು ರಹಸ್ಯವಾಗಿದ್ದಾನೆ, ಇಸ್ಲಾಮಿನ ಸಂಸ್ಕøತಿಯನ್ನು ಸರಿಯಾಗಿ ತಿಳಿದುಕೊಳ್ಳಲು ಹಿಂದೂಗಳು ಪ್ರಯತ್ನಿಸಿಲ್ಲ, ಕಾರಣ ಅವರು ಮಾದ್ಯಮಗಳ ಪ್ರಚಾರಗಳಿಂದ ಇಸ್ಲಾಮನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಇಸ್ಲಾಮನ್ನು ನಾವು ಅವುಗಳ ಪ್ರಮಾಣಗಳಾಗಿರುವ ಖುರಾನ್ ಮತ್ತು ಪ್ರವಾದಿಚರ್ಯೆಯ ಮೂಲಕ ಅರಿಯದೆ ಹೋದದ್ದು ಎಲ್ಲ ದುರತಗಳಿಗೆ ಕಾರಣ, ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಆರೋಪಿಸುದನ್ನು ಬಿಟ್ಟು ಪರಸ್ಪರ ಅರಿಯಲು ಪ್ರಯತ್ನಿಸಿದರೆ ಇಂದಿನ ಎಲ್ಲಾ ಕೋಮುಗಲಬೆಗಳು ರಾಜಕೀಯ ಪುಡಾರಿಗಳ ತಂತ್ರವೆಲ್ಲವು ಕೊನೆಗೊಳ್ಳಬಹುದು,

ಫಿತ್ರ್‍ಝಕಾತ್ ಅಥವಾ personal tax ರಂಝಾನಿನ ಕೊನೆಯ ದಿನ ಕಳೆದು ಇಸ್ಲಮಿಕ್ ಕ್ಯಾಲಂಡರಿನ ಪ್ರಕಾರ ಶವ್ವಾಲ್ ನ ತಿಂಗಳ ಚಂದ್ರ ದರ್ಶನವಾಗಿದೆ ಎಂದೂ ಖಾಝೀ (ಇಸ್ಲಾಮಿಕ್ ಜೆಸ್ಟೀಸ್) ರವರ ಪ್ರಖ್ಯಾಪನೆ ಉಂಟಾದರೆ ಈದುಲ್ ಫಿತೃ ಅಥವಾ ಸಣ್ಣ ಪೆರುನ್ನಾಳ್ ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸಲಿದ್ದಾರೆ ಜೂನ್ 3 ರಿಂದ ಅಮವಾಸ್ಯೆಯಾದುದರಿಂದ ಮಂಗಳವಾರ ಈದ್ ಆಗುವುದು ಸಂಶಯವಾಗಿದೆ, ಜೂನ್ 5ರಂದು ಭುದವಾರ ಈದ್ ಆಗಲು ಸಾದ್ಯವಿದೆ. ಬ್ಯಾರಿ ಮುಸ್ಲಿಂಗಳು ಕೇರಳದ ಖಾಝೀಗಳ ತೀರ್ಮಾನಕ್ಕೆ ಬಧ್ಧವಾಗಿರುವುದರಿಂದ ಅವರನ್ನೇ ಹಿಂಬಾಲಿಸುತ್ತಾರೆ, ಬೆಂಗಳೂರಿನ ಉರ್ದು ಮುಸಲ್ಮಾನರು ದೆಲ್ಲಿ ತೀರ್ಮಾನವನ್ನೇ ಅವಲಂಬಿಸಿ ಈದ್ ಆಚರಿಸುತ್ತಾರೆ, ಚಂದ್ರ ದರ್ಶನವಾಗಿದೆ ಎಂದು ಖಾಝೀಯವರು ತಿರ್ಮಾನಿಸಿದರೆ ಅದನ್ನು ಮಸ್ಲಿಂ ಸಮುದಾಯ ಪಾಲಿಸುವುದು ಕಡ್ಡಾಯವಾಗಿದೆ ರಂಝಾನಿನ ಕೊನೆಯ ಈದ್ನಲ್ಲಿ ಆಹಾರ ದಾನ್ಯವನ್ನು ಬಡವರಿಗೆ ದಾನವಗಿ ಕೊಡಲೇಬೇಕು ಮನೆಯ ಮಡದಿ ಮಕ್ಕಳು ತಂದೆ ತಾಯಿಯರಿಗೆ ಬಡಿಸಿ ಬಾಕಿಯಾಗುವುದಾದರೆ ಇಸ್ಲಾಂ ಆಙ್ಞಪಿಸಿದ ಆಹಾರ ದಾನ್ಯಗಳನ್ನು ಬಡವರಿಗೆ ಹಂಚಬೇಕು, ಇದು ಮಸೀದಿಗೆ ಪ್ರಾರ್ಥನೆಗೆ ಹೋಗುವ ಮುನ್ನ ಆಗಬೇಕು, ಇದನ್ನೇ ಫಿತೃ ಝಕಾತ್ ಎನ್ನುತ್ತಾರೆ, ಈ ಝಕಾತ್ ಪ್ರತಿಯೊಬ್ಬನ ಮೇಲೂ ಕಡ್ಡಾಯವಾಗಿದೆ, ಇಲದಿದ್ದರೆ” ಒಂದು ತಿಂಗಳ ಉಪವಸವನ್ನು ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸಲಾರ” ಎಂದು ಪ್ರವಾದಿ (ಸ.ಅ) ರವರು ಹೇಳಿದ್ದಾರೆ. ಪ್ರಾಯ ಪೂರ್ತಿ ಯಾದ ಪ್ರತಿಯೊಬ್ಬನು (ಮನೆಯ ಯಜಮಾನ) ಇದನ್ನು ದೀನದಲಿತರಿಗೆ ಬಡ ಬಗ್ಗರಿಗೆ ಅವರವರ ಮನೆಗೆ ತಲುಪಿಸಬೇಕು ಮನೆಯ ಪ್ರತಿ ಸದಸ್ಯರ ಪರವಾಗಿ 2.600 ಕೆ ಜಿ ಆಹಾರ ದಾನ್ಯಗಳನ್ನು ದಾನವಾಗಿ ಕೊಡಬೇಕು. “ಸಮಾಜದವರೆಲ್ಲರೂ ಹಬ್ಬದ ಸಂಭ್ರಮ ಆಚರಿಸಿ ಸಂತಸದಿಂದಿರಬೇಕು, ಈ ಹಬ್ಬದಂದು ಹಸಿದವರು ಸಮಾಜದಲ್ಲಿರಬಾರದು ಅಕ್ಕಪಕ್ಕದಲ್ಲಿರಬಾರದು ಎಂಬುದೇ ಈ ದಾನದ ಉದ್ದೇಶ”
ಒಂದು ಹೊತ್ತಿಗೆ ಅನ್ನ ಇಲ್ಲದೇ ರೋಗರುಜಿನಗಳಿಂದ ಬಳಲುತ್ತಿರುವ ಬಡಬಗ್ಗರ ಬಗ್ಗೆ ಅನುಕಂಪವಿಲ್ಲದೆ ಸಿರಿವಂತಿಕೆಯ ಭಕ್ಷ್ಯ ಪದಾರ್ಥಗಳನ್ನು ಸೇವಿಸಿ ಜೀರ್ಣಿಸಿಕೊಳ್ಳಲು ಆಗದೇ ಕಷ್ಟಪಡುವಷ್ಟರ ಮಟ್ಟಿಗೆ ತೇಗುವ 21ನೇ ಶತಮಾನದ ಶ್ರೀಮಂತ ಪುತ್ರರಿಗೆ ಈ ಹಬ್ಬವು ಶಕ್ತವಾದ ಸವಾಲಾಗಿದೆ ಎಂಬುವುದರಲ್ಲಿ ಎರೆಡನೆ ಮಾತಿಲ್ಲ .