ಈಶ್ವರಪ್ಪ ವಜಾಗೊಳಿಸಲು ಕಾಂಗ್ರೆಸ್ ಅಹೋರಾತ್ರಿ ಧರಣಿ – ಸದನದಲ್ಲೇ ರಾತ್ರಿ ಕಳೆದ ಕೈ ಶಾಸಕರು.

71
firstsuddi

ಬೆಂಗಳೂರು : ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಸದನದಲ್ಲೇ ರಾತ್ರಿ ಕಳೆದಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹೆಚ್.ಕೆ.ಪಾಟೀಲ್, ಈಶ್ವರ ಖಂಡ್ರೆ, ಎನ್.ಎ.ಹ್ಯಾರಿಸ್, ಅಜಯ್ ಸಿಂಗ್, ರಮೇಶ್ ಕುಮಾರ್, ಸೌಮ್ಯಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ರೂಪಾ ಶಶಿಧರ್, ಕುಸುಮಾ ಶಿವಳ್ಳಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸದನದಲ್ಲೇ ರಾತ್ರಿ ಕಳೆದರು. ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಮನವಿಗೂ ಬಗ್ಗದ ಕೈ ನಾಯಕರು ಸದನದಲ್ಲೇ ಹಾಸಿಗೆ, ದಿಂಬು ಹಾಸಿ ಮಲಗಿದ್ರು.

ಧರಣಿ ನಿರತ ಕಾಂಗ್ರೆಸ್ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಹಾಸಿಗೆ, ದಿಂಬು, ಬೆಡ್ ಶೀಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಮಾರು 80 ಬೆಡ್ ಗಳನ್ನು ಪೂರೈಸಲಾಗಿದೆ. ಭೋಜನ ಸವಿದ ಕೈ ಶಾಸಕರು ಬಳಿಕ ವಿಧಾನಸಭೆ ಸಭಾಂಗಣದಲ್ಲೇ ಹಾಸಿಗೆ ಹಾಸಿ ಮಲಗಿದರು.