ಕೀವ್ : ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಗೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್(21) ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇಂದು ಭಾರತದ ಮತ್ತೋರ್ವ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಉಕ್ರೇನ್ ನ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪಂಜಾಬ್ನ ಬರ್ನಾಲಾ ಮೂಲದ ಚಂದನ್ ಜಿಂದಾಲ್ (22), ಮಿದುಳು ಪಾರ್ಶ್ವವಾಯುವಿನಿಂದ (ಬ್ರೈನ್ ಸ್ಟ್ರೋಕ್) ಮೃತಪಟ್ಟಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಬ್ರೈನ್ ಸ್ಟ್ರೋಕ್ನಿಂದ ಬಳುಲುತ್ತಿದ್ದ ಚಂದನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಅವರ ಕುಟುಂಬಕ್ಕೂ ಈಗಾಗಲೇ ವಿಷಯ ತಿಳಿಸಲಾಗಿದ್ದು, ಪುತ್ರನ ಪಾರ್ಥಿವ ಶರೀರವನ್ನು ವಾಪಸ್ ತರಲು ಕ್ರಮವಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮೃತನ ತಂದೆ ಪತ್ರ ಬರೆದಿದ್ದಾರೆ.










