ಉಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದ ರಷ್ಯಾದ ಮೇಜರ್ ಜನರಲ್.

86
firstsuddi

ಕೀವ್ : ಖಾರ್ಕಿವ್‍ನಲ್ಲಿ ನಡೆದ ಸಂಘರ್ಷದಲ್ಲಿ ರಷ್ಯಾದ ಜನರಲ್ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಮಿಲಿಟರಿ ಗುಪ್ತಚರ ಸಂಸ್ಥೆ ತಿಳಿಸಿದೆ.

ಮೃತಪಟ್ಟ ಅಧಿಕಾರಿಯನ್ನು ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್(45) ಎಂದು ಗುರುತಿಸಲಾಗಿದೆ. ಎರಡನೇ ಚೆಚೆನ್ ಯುದ್ಧ ಮತ್ತು ಸಿರಿಯಾದಲ್ಲಿ ನಡೆದ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ವಿಟಾಲಿ ಗೆರಾಸಿಮೊವ್ ಅವರ ಪಾತ್ರವಿದೆ. 2014ರಲ್ಲಿ ಕ್ರಿಮಿಯಾವನ್ನು ವಶಪಡಿಸಿಕೊಂಡಾಗ ಆ ಯುದ್ಧದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಈಗಾಗಲೇ ರಷ್ಯಾದ 7ನೇ ಏರ್ ಫೋರ್ಸ್ ವಿಭಾಗದ ಕಮಾಂಡಿಂಗ್ ಮೇಜರ್ ಜನರಲ್ ಆಂಡ್ರೇ ಸುಖೋವೆಟ್ಸ್ಕಿ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಹೇಳಿದೆ.