ಮಾಸ್ಕೋ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿಲ್ ಅವರು ಉಕ್ರೇನ್ ಮೇಲೆ ಯುದ್ಧವನ್ನು ಘೋಷಿಸಿದ್ದಾರೆ.
ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪುಟಿನ್, ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ. ನಮ್ಮ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸುವ ಯಾರಿಗಾದರೂ ರಷ್ಯಾದಿಂದ ಪ್ರತಿಕ್ರಿಯೆ ತಕ್ಷಣವೇ ಬರುತ್ತದೆ, ಎಚ್ಚರ ನಿಮ್ಮ ಇತಿಹಾಸದಲ್ಲಿ ನೀವು ಹಿಂದೆಂದೂ ಅನುಭವಿಸದಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜಗತ್ತಿನ ದೇಶಗಳಿಗೆ ಎಚ್ಚರಿಕೆ ನೀಡಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ದೇಶವನ್ನು ಸೈನ್ಯಮುಕ್ತಗೊಳಿಸುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಪೂರ್ವ ಬಂದರು ನಗರವಾದ ಮರಿಯುಪೋಲ್ ನಲ್ಲಿ ಪ್ರಬಲ ಸ್ಫೋಟಗಳು ಕೇಳಿಬಂದವು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಇತ್ತ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ಘೋಷಿಸಿದ ಪುತಿನ್ ನಿರ್ಧಾರವನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಖಂಡಿಸಿದ್ದಾರೆ. ಈ ದಾಳಿಯಿಂದ ಉಂಟಾಗುವ ಸಾವು, ಹಾನಿ, ವಿನಾಶಗಳಿಗೆ ರಷ್ಯಾ ಮಾತ್ರ ಹೊಣೆಗಾರನಾಗಿರುತ್ತದೆ. ಯುದ್ಧ ನಡೆದರೆ ಅದರ ಸಂಪೂರ್ಣ ಹೊಣೆ ರಷ್ಯಾದ್ದೇ ಆಗಿದೆ ಎಂದು ಹೇಳಿದ್ದಾರೆ.










