ಉಡುಪಿ : ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಅಫಘಾತದಲ್ಲಿ ಯುವಕ ಮೃತಪಟ್ಟಿರುವ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. ಮೃತ ಯುವಕನನ್ನು ಕಾರ್ಕಳ ನಿವಾಸಿ ಅಶ್ವಿನ್ ಸ್ಯಾಮ್ಸನ್ ಸೋನ್ಸ್ ಎಂದು ಗುರುತಿಸಲಾಗಿದೆ. ನಡ್ಸಾಲು ಗ್ರಾಮದ ಆಭರಣ ಜ್ಯುವೆಲರ್ ಎದುರು ಪಡುಬಿದ್ರೆ- ಕಾರ್ಕಳ ರಾಜ್ಯ ಹೆದ್ದಾರಿ 1 ರ ರಸ್ತೆಯಲ್ಲಿ ಸಂದೀಪ್ ಕಾಮತ್ ಎಂಬುವವರು ತಮ್ಮ ಸುಜುಕಿ ಇಕೋ ವಾಹನದಲ್ಲಿ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಅತಿವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದ್ದಿದ್ದು, ಪಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಚಲಾಯಿಸುತ್ತಿದ್ದ ಅಶ್ವಿನ್ ಅವರ ಜುಪಿಟರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಅಶ್ವಿನ್ ಸ್ಯಾಮ್ಸನ್ ಸೋನ್ಸ್ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










