ಉದ್ಯಮಿ ಮುಕೇಶ್ ಅಂಬಾನಿಗೆ ಜೀವ ಬೆದರಿಕೆ– ಆರೋಪಿಯ ಬಂಧನ…

49
firstsuddi

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮೂಲದ ಆರೋಪಿಯೋರ್ವನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಗಣೇಶ್ ರಮೇಶ್ ವನಪರ್ಡಿ (19) ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇ-ಮೇಲ್ ಐಡಿ ಶಾದಾಬ್ ಖಾನ್ ಎಂಬ ವ್ಯಕ್ತಿಗೆ ಸೇರಿದ್ದು, ಬೆಲ್ಜಿಯಂನಿಂದ ಇ-ಮೇಲ್ ಸಂದೇಶಗಳು ಬಂದಿವೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಇದು ವ್ಯಕ್ತಿಯ ಸರಿಯಾದ ಐಡಿಯೇ ಅಥವಾ ನಕಲಿ ಐಡಿ ಬಳಸಿ ಇ-ಮೇಲ್‍ಗಳನ್ನು ಕಳುಹಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಕ್ಟೋಬರ್ 31 ಮುಖೇಶ್ ಅಂಬಾನಿ ಅವರಿಗೆ 400 ಕೋಟಿ ನೀಡುವಂತೆ ಇಮೇಲ್ ಬಂದಿತ್ತು. ಒಂದು ವೇಳೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಮೇಲ್​​ನ ಆಧಾರದ ಮೇಲೆ ಅಂಬಾನಿ ಅವರು ಭದ್ರತಾ ಪಡೆ ಪೊಲೀಸರಿಗೆ ದೂರು ನೀಡಿದೆ.
ಈ ದೂರಿನ ಆಧಾರದ ಮೇಲೆ ಗಾಮದೇವಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಅಂಬಾನಿ ಅವರಿಗೆ ಇಂತಹ 5 ಇಮೇಲ್​​ಗಳು ಬಂದಿದೆ. ಮೊದಲು 20 ಕೋಟಿ ನಂತರ 200 ಕೋಟಿ, ಮೂರನೇ ಬಾರಿ 400 ಕೋಟಿ ರೂ, ಬೇಡಿಕೆ ಇಟ್ಟಿದ್ದಾನೆ, ಅದರೆ ಈ ಯಾವುದಕ್ಕೂ ಅಂಬಾನಿ ಅವರ ಭದ್ರತಾ ಪಡೆ ಪ್ರತಿಕ್ರಿಯೆ ನೀಡದ ಕಾರಣ, ನಿರ್ಲಕ್ಷಿಸಿದರೆ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮೇಲ್ ಮಾಡಿದ್ದಾರೆ.

ಮುಕೇಶ್ ಅಂಬಾನಿ ಅವರಿಗೆ ಈ ಹಿಂದೆ ಸಹ ಕೊಲೆ ಬೆದರಿಕೆ ಬಂದಿತ್ತು. ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ಬೆದರಿಕೆ ಕರೆ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ಕಳೆದ ವರ್ಷ ಬಿಹಾರದ ವ್ಯಕ್ತಿಯನ್ನು ಬಂಧಿಸಿದ್ದರು.