ಮಂಗಳೂರು: ಚರ್ಚ್ ವಾರ್ಷಿಕೋತ್ಸವಕ್ಕೆ ಬಂದು ವಾಪಾಸಾಗುತ್ತಿದ್ದ ವೇಳ ದೋಣಿ ಮಗುಚಿ ಬಿದ್ದು ಯುವತಿ ಮೃತಪಟ್ಟ ಘಟನೆ ಉಳ್ಳಾಲ ಸಮೀಪದ ಉಳಿಯದಲ್ಲಿ ಭಾನುವಾರ ಸಂಭವಿಸಿದೆ. ಮೃತ ಯುವತಿಯನ್ನು ರೆನಿಟಾ (18) ಎಂದು ಗುರುತಿಸಲಾಗಿದೆ. ಭಾನುವಾರ ತೊಕ್ಕೊಟ್ಟು ಚರ್ಚ್ ನ ವಾರ್ಷಿಕೋತ್ಸವಕ್ಕೆಂದು ಉಳಿಯ ನಿವಾಸಿ ಜಾರ್ಜ್ ಎಂಬವರ ಮನೆಗೆ ಬಂದಿದ್ದು ಹಬ್ಬ ಮುಗಿಸಿ ದೋಣಿಯಲ್ಲಿ ಆರು ಮಂದಿ ತೆರಳುವ ಸಂದರ್ಭದಲ್ಲಿ ದೋಣಿ ಮುಗುಚಿ ಬಿದ್ದಿದ್ದು ಇನ್ನೋರ್ವ ಯುವತಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ










