ಎನ್ಎಸ್ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣನ್ ಮನೆ ಮೇಲೆ ಐಟಿ ದಾಳಿ…

74
firstsuddi

ನವದೆಹಲಿ : ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಅವರಿಗೆ ಸಂಬಂಧಿಸಿದ ನಿವೇಶನಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಆಕೆಯ ವಿರುದ್ಧ ತೆರಿಗೆ ವಂಚನೆ ತನಿಖೆಯ ಭಾಗವಾಗಿ ಮುಂಬೈ ಮತ್ತು ಚೆನ್ನೈನಲ್ಲಿ ಅವರಿಗೆ ಸಂಬಂಧಿಸಿದ ಕಚೇರಿ, ಮನೆಗಳ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ಸೆಬಿ ಆದೇಶದ ನಂತರ ಚಿತ್ರಾ ರಾಮಕೃಷ್ಣ ಅವರು ಸುದ್ದಿಯಲ್ಲಿದ್ದಾರೆ. ಅವರು ಆನಂದ್ ಸುಬ್ರಮಣಿಯನ್ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಗೆ ಸಲಹೆಗಾರರಾಗಿ ನೇಮಕ ಮಾಡಲು ಸಂಬಂಧಿಸಿದ ಸೆಕ್ಯುರಿಟೀಸ್ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಎನ್ಎಸ್ಇ ಕಂಡು ಹಿಡಿದಿದೆ. ಅಲ್ಲದೆ ಅನಾಮದೇಯ ಯೋಗಿ ಬಾಬಾಗೆ ಇ-ಮೇಲ್ ಮೂಲಕ ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದರು.

ಚಿತ್ರಾ ರಾಮಕೃಷ್ಣ ಅವರು ಏಪ್ರಿಲ್, 2013 ರಿಂದ ಡಿಸೆಂಬರ್, 2016 ರವರೆಗೆ ಎನ್ಎಸ್ಇ ನ  ಎಂಡಿ ಮತ್ತು ಸಿಇಒ ಆಗಿದ್ದರು. ಚಿತ್ರಾ ರಾಮಕೃಷ್ಟ ಮತ್ತು ಇತರರ ವಿರುದ್ಧ ತೆರಿಗೆ ವಂಚನೆ ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳ ಮೇರೆಗೆ ಅಧಿಕಾರಿಗಳು ಈ ಶೋಧ ನಡೆಸಿದ್ದಾರೆ ಎನ್ನಲಾಗಿದೆ.