ಎರಡನೇ ಮದುವೆಗೆ ಸಿದ್ಧರಾದ 2015ರ ಐಎಎಸ್ ಟಾಪರ್ ಟೀನಾ ದಾಬಿ.

72
firstsuddi

ನವದೆಹಲಿ : 2015ರಲ್ಲಿ ಐಎಎಸ್ ನಲ್ಲಿ ಟಾಪರ್ ಆಗಿದ್ದ ಟೀನಾ ದಾಬಿ ಅವರು ಇದೀಗ ಮತ್ತೊಬ್ಬ ಐಎಎಸ್ ಅಧಿಕಾರಿ ಜೊತೆಗೆ 2ನೇ ಮದುವೆಯಾಗುತ್ತಿದ್ದಾರೆ.

2013ರ ಐಎಎಸ್ ಬ್ಯಾಚ್ ನ ಅಧಿಕಾರಿ ಪ್ರದೀಪ್ ಗವಾಂಡೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಟೀನಾ ಸಾಮಾಜಿಕ ಜಾಲತಾಣ ಇನ್ ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಭಾವಿ ಪತಿ ಪ್ರದೀಪ್ ಗಾವಂಡೆ ಅವರಿಗೂ ಇದು ಎರಡನೇ ಮದುವೆ. ಐಎಎಸ್ ಆಗುವ ಮೊದಲು ಅವರು ವೈದ್ಯರಾಗಿದ್ದರು ಎನ್ನಲಾಗಿದೆ.

2015 ರಲ್ಲಿ, ಟಿನಾ ದಾಬಿ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ದಲಿತ ಅಧಿಕಾರಿ. ಅದೇ ವರ್ಷ ಅಥರ್ ಖಾನ್ ಎರಡನೇ ಸ್ಥಾನ ಪಡೆದರು. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. 2018 ರಲ್ಲಿ ಅವರಿಬ್ಬರ ವಿವಾಹವು ಬಹಳಷ್ಟು ಸುದ್ದಿ ಮಾಡಿತ್ತು. ಟೀನಾ 2020ರ ನವೆಂಬರ್ ನಲ್ಲಿ ಅಥರ್ ಖಾನ್ ಅವರಿಂದ ವಿಚ್ಚೇದನ ಪಡೆದಿದ್ದಾರೆ.