ನವದೆಹಲಿ : ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ನಿನ್ನೆ ಪ್ರಕಟಿಸಿದೆ. ಆರು ಸಾಧಕರಿಗೆ ಪದ್ಮ ವಿಭೂಷಣ, ಒಂಭತ್ತು ಸಾಧಕರಿಗೆ ಪದ್ಮ ಭೂಷಣ ಹಾಗೂ 91 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ಕರ್ನಾಟಕದ ರಾಜಕಾರಣಿ ಎಸ್.ಎಂ.ಕೃಷ್ಣ ಅವರಿಗೆ ‘ಪದ್ಮ ವಿಭೂಷಣ’ ಹಾಗೂ ಸುಧಾಮೂರ್ತಿ, ಎಸ್.ಎಲ್.ಭೈರಪ್ಪ ‘ಪದ್ಮ ಭೂಷಣ’ ಪ್ರಶಸ್ತಿ ಸಂದಿದೆ. ಕರ್ನಾಟಕದ ಕೊಡವ ನೃತ್ಯ (ಜನಪದ) ಕಲಾವಿದೆ ರಾಣಿ ಮಾಚಯ್ಯ ಮತ್ತು ಚಿಕ್ಕಬಳ್ಳಾಪುರದ ತಮಟೆಯ ತಂದೆ ಖ್ಯಾತಿಯ ತಮಟೆ ಕಲಾವಿದ ಮುನಿ ವೆಂಕಟಪ್ಪ ಸೇರಿ ಐದು ಜನರಿಗೆ 2023ರ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಒಟ್ಟು 91 ಮಂದಿ ಸಾಧಕರು ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯದ ಖಾದರ್ ವಲ್ಲಿದುಡೇಕುಲ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ, ಮೈಸೂರಿನ ಎಸ್. ಸುಬ್ಬರಾವ್ ಅವರಿಗೆ ಪ್ರಾಚ್ಯವಸ್ತು ಸಂಶೋಧನೆಗೆ ಪದ್ಮಶ್ರೀ ದೊರೆತಿದೆ. ಬಿದ್ರಿ ಕೆತ್ತನೆಯಲ್ಲಿತೊಡಗಿರುವ ರಾಜ್ಯದ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ ಅವರಿಗೂ ಪದ್ಮಶ್ರೀ ಸಂದಿದೆ.
ಆರು ಜನರಿಗೆ ಪದ್ಮ ವಿಭೂಷಣ:
• ಗುಜರಾತ್ ನ ಬಾಲಕೃಷ್ಣ ದೋಶಿ (ಮರಣೋತ್ತರ) – ವಾಸ್ತುಶಿಲ್ಪಿ
• ಝಾಕಿರ್ ಹುಸೇನ್ – ಕಲೆ
• ಕರ್ನಾಟಕದ ಎಸ್.ಎಂ.ಕೃಷ್ಣ – ಸಾರ್ವಜನಿಕ ವ್ಯವಹಾರಗಳು
• ಪಶ್ಚಿಮ ಬಂಗಾಳದ ದಿಲೀಪ್ ಮಹಲಾನಬಿಸ್ (ಮರಣೋತ್ತರ) – ಔಷಧ
• ಅಮೆರಿಕದಲ್ಲಿ ನೆಲೆಸಿರುವ ಗಣಿಶಾಸ್ತ್ರಜ್ಞ ಶ್ರೀನಿವಾಸ್ ವರ್ಧನ್ -ವಿಜ್ಞಾನ ಮತ್ತು ತಂತ್ರಜ್ಞಾನ
• ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ)- ಸಾರ್ವಜನಿಕ ವ್ಯವಹಾರಗಳು
9 ಜನ ಸಾಧಕರಿಗೆ ಪದ್ಮ ಭೂಷಣ:
• ಕರ್ನಾಟಕ ಎಸ್.ಎಲ್.ಭೈರಪ್ಪ- ಸಾಹಿತ್ಯ ಮತ್ತು ಶಿಕ್ಷಣ
• ಕುಮಾರ ಮಂಗಳಂ ಬಿರ್ಲಾ – ವ್ಯಾಪಾರ ಮತ್ತು ಕೈಗಾರಿಕೆ
• ದೀಪಕ್ ಧಾರ್ – ವಿಜ್ಞಾನ ಮತ್ತು ತಂತ್ರಜ್ಞಾನ
• ವಾಣಿ ಜಯರಾಂ – ಕಲೆ
• ಸ್ವಾಮಿ ಚಿನ್ನ ಜೀಯಾರ್ – ಅಧ್ಯಾತ್ಮ
• ಸುಮನ್ ಕಲ್ಯಾಣ್ಪುರ್ – ಕಲೆ
• ಕಪಿಲ್ ಕಪೂರ್ – ಸಾಹಿತ್ಯ ಮತ್ತು ಶಿಕ್ಷಣ
• ಕರ್ನಾಟಕದ ಸುಧಾ ಮೂರ್ತಿ – ಸಾಮಾಜ ಸೇವೆ
• ಕಮಲೇಶ್ ಡಿ ಪಟೇಲ್- ಆಧ್ಯಾತ್ಮ










