ಏಷ್ಯನ್ ಗೇಮ್ಸ್ 2023: ಮಿಶ್ರ ಡಬಲ್ಸ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ…

66
firstsuddi

ಬೀಜಿಂಗ್: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಮಿಶ್ರ ಡಬಲ್ಸ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತದ ಟೆನ್ನಿಸ್ ಜೋಡಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಭಾರತದ ಜೋಡಿ ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಬೇಕಾಯಿತು. ಮೊದಲ ಸೆಟ್‌ನಲ್ಲಿ ಬೋಪಣ್ಣ ಮತ್ತು ರುತುಜಾ ಜೋಡಿಯನ್ನು ಚೈನೀಸ್ ತೈಪೆ ಜೋಡಿಯು 6-2 ರಿಂದ ಸುಲಭವಾಗಿ ಸೋಲಿಸಿತು. ಆದರೆ ಬೋಪಣ್ಣ ತಮ್ಮ ಅನುಭವವನ್ನು ಬಳಸಿಕೊಂಡು ಕಮ್ ಬ್ಯಾಕ್ ಮಾಡಿ, ಎರಡನೇ ಸೆಟ್ ಅನ್ನು 6-3 ಅಂತರದಲ್ಲಿ ಜಯ ಸಾಧಿಸಿದರು. ಮೂರನೇ ಸೆಟ್‌ನಲ್ಲಿ ಎರಡೂ ತಂಡಗಳು ಅತ್ಯುತ್ತಮ ಆಟ ಪ್ರದರ್ಶಿಸಿದವು. ಈ ಸೆಟ್ ಎಷ್ಟು ಕಠಿಣವಾಗಿತ್ತು ಎಂದರೆ ಟೈ ಬ್ರೇಕರ್‌ನಲ್ಲಿ ವಿಜೇತರನ್ನು ನಿರ್ಧಾರಿಸಬೇಕಾಯಿತು. ಅಲ್ಲಿ ಭಾರತದ ಜೋಡಿ ಗೆದ್ದು ಭಾರತಕ್ಕೆ ಪದಕವನ್ನು ಗೆದ್ದುಕೊಟ್ಟಿತು. ಬೋಪಣ್ಣ ತನ್ನ ಅನುಭವದ ಲಾಭವನ್ನು ಪಡೆದರೆ, ರುತುಜಾ ಸಹ ಕಾಲಕಾಲಕ್ಕೆ ತನ್ನ ಆಟವನ್ನು ಸುಧಾರಿಸುವ ಮೂಲಕ ತಂಡದ ಗೆಲುವಿಗೆ ಸಹಾಯ ಮಾಡಿದರು.