ಏ.10 ರಂದು ಕೋದಂಡರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಉತ್ಸವ…

64
firstsuddi

ಚಿಕ್ಕಮಗಳೂರು : ನಗರದ ನೇಕಾರ ಬೀದಿಯ ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದಲ್ಲಿ 42ನೇ ವಾರ್ಷಿಕೋತ್ಸವ ಮತ್ತು ಶ್ರೀರಾಮನವಮಿ ಉತ್ಸವ ಏ.10 ರಂದು ನಡೆಯಲಿದೆ.

ಅಂದು ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ, ದೇವತಾ ಪ್ರಾರ್ಥನೆ, ಪುಣ್ಯಾಹ, ನಾಂದಿ, ಶ್ರೀ ಕೋದಂಡರಾಮಚಂದ್ರಸ್ವಾಮಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಶ್ರೀ ಮಹಾಗಣಪತಿ, ನವಗ್ರಹ ಹೋಮ, ಸರ್ವತೋಮಂಡಲ ಪೂಜೆ, ಶ್ರೀ ರಾಮತಾರಕ ಮೂಲಮಂತ್ರ ಹೋಮ ಮತ್ತು ಶ್ರೀ ಆಂಜನೇಯ ಹೋಮ ಜರುಗಲಿದೆ.

ಮಧ್ಯಾಹ್ನ 12 ಗಂಟೆಗೆ ಹೋಮದ ಪೂರ್ಣಾಹುತಿ, ಮಹಾಮಂಗಳಾರತಿ, ವಸಂತ ಸೇವೆ, ಸಂಜೆ 6 ಕ್ಕೆ ಉತ್ಸವ ಮೂರ್ತಿಯ ರಾಜಬೀದಿ ಮೆರವಣಿಗೆ, ರಾತ್ರಿ 8 ಕ್ಕೆ ಉಯ್ಯಾಲೆ ಸೇವೆ, ಮಹಾಮಂಗಳಾರತಿ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಅರ್ಚಕ ವೇ.ಬ್ರ. ಕೆ.ವಿ.ಸತ್ಯಪ್ರಸನ್ನ ತಿಳಿಸಿದ್ದಾರೆ.