ಐಟಿ ಅಧಿಕಾರಿಗಳು ನನಗೆ ಉಸಿರಾಡಲು ಬಿಡುತ್ತಿಲ್ಲ : ಡಿ.ಕೆ.ಶಿವಕುಮಾರ್.

225
firstsuddi

ಬೆಂಗಳೂರು : ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಈ ತಿಂಗಳ ಕೊನೆಯೊಳಗೆ ಅಂತಿಮ ಹೇಳಿಕೆಯನ್ನು ದಾಖಲಿಸಬೇಕು ಎಂದು ನೋಟೀಸ್‍ನಲ್ಲಿ ಸೂಚಿಸಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಆದಾಯ ತೆರಿಗೆ ಇಲಾಖೆಯವರು ನೋಟಿಸ್ ಮೇಲೆ ನೋಟೀಸ್ ನೀಡುತ್ತಿದ್ದಾರೆ. ಒಂದು ತಿಂಗಳಲ್ಲಿ 30ನೋಟೀಸ್ ಕಳುಹಿಸಿದ್ದಾರೆ. ಅವರು ನನಗೆ ಉಸಿರಾಡಲು ಬಿಡುತ್ತಿಲ್ಲ ಏನ್ ಮಾಡೋಣ. ಉಸಿರಾಡಲು ಅವಕಾಶ ಕಲ್ಪಿಸುವಂತೆ ಐಟಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ಕೂಡಲೇ ಅಸ್ಸೆಸ್‍ಮೆಂಟ್ ಆರ್ಡರ್ ಮಾಡಬೇಕೆಂದು ಹೇಳುತ್ತಿದ್ದಾರೆ. ಹೋಗಿ ಅಧಿಕಾರಿಗಳನ್ನು ಭೇಟಿಯಾಗುತ್ತೇನೆ ಎಂದರು.