ಐದು ರೂಪಾಯಿ ನಾಣ್ಯ ನುಂಗಿದ ನಾಲ್ಕು ವರ್ಷದ ಹೆಣ್ಣುಮಗು ಸಾವು…

98
firstsuddi

ಮೈಸೂರು : ಐದು ರೂಪಾಯಿ ನಾಣ್ಯ ನುಂಗಿದ ಹೆಣ್ಣುಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕಿನ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಖುಷಿ(4) ಮೃತ ದುರ್ದೈವಿ. ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿದ್ದ ಖುಷಿ ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 5 ರೂ. ನಾಣ್ಯ ನುಂಗಿದ್ದಾಳೆ. ಮಗುವನ್ನ ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಗು ಮೃತಪಟ್ಟಿದೆ.