ಒಂದೇ ಕಾರ್ಡ್ ನಲ್ಲಿ ಆಧಾರ್, ಪಾನ್, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ; ಅಮಿತ್ ಶಾ ಚಿಂತನೆ…

290
firstsuddi

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಧಾರ್ ಕಾರ್ಡ್‍ಗೆ ಗುಡ್ ಬೈ ಹೇಳಲು ಮುಂದಾಗಿದ್ದು, ದೇಶದ ಜನರ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಗಳನ್ನು ಒಳಗೊಂಡ ಬಹು ಉಪಯೋಗಿ ಕಾರ್ಡ್‍ನ್ನು ಬಳಸಿದರೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಇಂದು ದೆಹಲಿಯಲ್ಲಿ ಜನಗಣತಿ ಕಟ್ಟಡ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, 2021ರ ಜನಗಣತಿಯನ್ನು ಮೊಬೈಲ್ ಅಪ್ಲಿಕೇಷನ್ ಮುಖಾಂತರ ನಡೆಸಲಾಗುವುದು. ಇಲ್ಲಿಯವರೆಗೆ ನಡೆಯುತ್ತಿದ್ದ ಪೇಪರ್ ಸಮೀಕ್ಷೆಯನ್ನು ಈ ಅಪ್ಲಿಕೇಷನ್ ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತನೆ ಮಾಡಲಿದೆ. ಅಲ್ಲದೇ ಆಧಾರ್ ಕಾರ್ಡ್, ಡಿ.ಎಲ್, ವೋಟರ್ ಐಡಿ, ಬ್ಯಾಂಕ್ ಖಾತೆ, ಹಾಗೂ ಪಾಸ್ ಪೋರ್ಟ್‍ಗಳನ್ನು ಒಳಗೊಂಡ ಒಂದೇ ಕಾರ್ಡ್ ಇದ್ದರೆ ಬಹಳ ಸಹಾಯವಾಗುತ್ತದೆ ಎಂದರು.