ಒಂದೇ ಕುಟುಂಬದ ಐವರ ಆತ್ಮಹತ್ಯೆ ಕೇಸ್ – ತಂದೆ ಶಂಕರ್ ಕೊಲೆಗೆ ಸ್ಕೆಚ್ ಹಾಕಿದ್ದ ಮಧುಸಾಗರ್!

84
firstsuddi

ಬೆಂಗಳೂರು : ತಿಗಳರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್ ವಿಚಾರಣೆ ಮುಂದುವರಿದಿದ್ದು, ಈ ವೇಳೆ ಅವರು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ತನ್ನನ್ನು ಕೊಲೆ ಮಾಡಲು ಮಗ ಮಧುಸಾಗರ್ ಸ್ಕೆಚ್ ಹಾಕಿರುವ ವಿಚಾರವನ್ನು ಸ್ವತಃ ಶಂಕರ್ ಅವರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 12 ರಂದು 10 ಲಕ್ಷ ಕೊಡ್ತೇನೆ ಬಾ ಅಂತ ಮಗ ಶಂಕರ್ ಗೆ ಮೆಸೇಜ್ ಹಾಕಿದ್ದ. ಮೆಸೇಜ್ ಗೆ ರಿಪ್ಲೈ ಮಾಡದಿದ್ದಾಗ ಮಧುಸಾಗರ್ ತನ್ನ ತಂದೆಗೆ 3 ಬಾರಿ ಕಾಲ್ ಮಾಡಿದ್ದ. ಮಗನ ಮಾತು ನಂಬಿ ನಾನು ಮನೆಗೆ ಹೋಗಿದ್ರೆ ಅಂದೇ ಕೊಲೆ ಆಗುತ್ತಿದ್ದೆ ಎಂದು ಹಲ್ಲೇಗೆರೆ ಶಂಕರ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ.  ಹಲ್ಲೆಗೇರೆ ಶಂಕರ್ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ತಾಂತ್ರಿಕ ಸಾಕ್ಷ್ಯಾಧಾರ ಹೋಲಿಕೆಯಾಗಬಹುದು. ಆದರೆ ನಿರೂಪಿಸುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

ಕುಟುಂಬಸ್ಥರ ಆತ್ಮಹತ್ಯೆಗೆ ಪರೋಕ್ಷ ಪ್ರಚೋದನೆ ನೀಡಿರುವ ಆರೋಪದಡಿ ಶಂಕರ್ ಹಾಗೂ ಇಬ್ಬರು ಅಳಿಯಂದಿರನ್ನು ಬಂಧಿಸಲಾಗಿತ್ತು.