ಓಮಿಕ್ರಾನ್ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ರೂಪಾಂತರಿ ಪತ್ತೆ.. ಅದುವೇ ಡೆಲ್ಮಿಕ್ರಾನ್!

68
firstsuddi

ನವದೆಹಲಿ : ವಿಶ್ವದಲ್ಲಿ ಮೂರನೇ ಅಲೆಯ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ಬೆನ್ನಲ್ಲೇ ಇದೀಗ ಡೆಲ್ಮಿಕ್ರಾನ್ ಎಂಬ ಹೊಸ ವೈರಸ್ ಪತ್ತೆಯಾಗಿದೆ.

ಡೆಲ್ಮಿಕ್ರಾನ್ ಕೋವಿಡ್‍ನ ಡಬಲ್ ರೂಪಾಂತರಿಯಾಗಿದ್ದು, ಇದು ಅಮೆರಿಕ ಮತ್ತು ಯೂರೋಪ್ ನ ಹಲವಡೆ ಕಾಣಿಸಿಕೊಂಡಿದೆ. ಇದನ್ನು ಸಿಂಪಲ್ಲಾಗಿ ಹೇಳುವುದಾದರೆ ಈ ಮೊದಲು ಕಾಣಿಸಿಕೊಂಡಿದ್ದ ಡೆಲ್ಟಾ ಮತ್ತು ಓಮಿಕ್ರಾನ್​ ರೂಪಾಂತರ ವೈರಸ್​ಗಳ ಮಿಶ್ರಣವೇ ಈ ಡೆಲ್ಮಿಕ್ರಾನ್ ಆಗಿದೆ. 

ಇನ್ನೂ ಆತಂಕದ ವಿಚಾರ ಏನೆಂದರೆ ಈಗ ಅಸ್ಥಿತ್ವದಲ್ಲಿರುವಂತಹ ರೂಪಾಂತರ ವೈರಸ್ ಗಳಿಗಿಂತಲೂ ಅತಿ ವೇಗವಾಗಿ ಹರಡುವ ಸಾಮರ್ಥ್ಯ ಈ ವೈರಸ್​ಗೆ  ಇದೆ. ಆದರೆ, ಬೇರೆ ರೂಪಾಂತರಿಗಳಷ್ಟು ಗಂಭೀರವಾದ ದುಷ್ಪರಿಣಾಮಗಳನ್ನು ಈ ಡೆಲ್ಮಿಕ್ರಾನ್ ಉಂಟು ಮಾಡುವುದಿಲ್ಲ ಎಂದು ತಜ್ಞರ ಅಭಿಪ್ರಾಯವಾಗಿದೆ. ಒಟ್ಟಾರೆ ಮತ್ತಷ್ಟು ಸಂಶೋಧನೆಯ ನಂತರವಷ್ಟೇ ಡೆಲ್ಮಿಕ್ರಾನ್ ಸಾಮರ್ಥ್ಯದ ಬಗ್ಗೆ ಗೊತ್ತಾಗಲಿದೆ.