ಮಂಡ್ಯ : ಮದ್ದೂರು ತಾಲೂಕು ಕಚೇರಿ ಮೇಲಿಂದ ಜಿಗಿದು ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ವೆಂಕಟೇಶ್ ಮೃತ ನೌಕರ. ಮಂಡ್ಯ ತಾಲೂಕು ಕಚೇರಿಯ ನೌಕರರಾಗಿದ್ದ ವೆಂಕಟೇಶ್ ನಿನ್ನೆ ಕಾರ್ಯ ನಿಮಿತ್ತ ಮದ್ದೂರು ತಾಲೂಕು ಕಚೇರಿಗೆ ಬಂದಿದ್ದರು. ಈ ವೇಳೆ ಕಚೇರಿಯ ಕಟ್ಟಡದ ಮೇಲೆ ತೆರಳಿ ಹಾರಿದ್ದಾರೆ.
ತಕ್ಷಣವೇ ಸ್ಥಳದಲ್ಲಿ ಇದ್ದ ನೌಕರರು ವೆಂಕಟೇಶ್ ನನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










