ಬೆಂಗಳೂರು : ನಗರದ ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಗೆ ಬಿಬಿಎಂಪಿ ಗ್ರೀನ್ ಸಿಗ್ನಲ್ ನೀಡಿದೆ.
ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕಡಲೆಕಾಯಿ ಪರಿಷೆಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಮತ್ತೆ ಕಡಲೆಕಾಯಿ ಪರಿಷೆಗೆ ಬಿಬಿಎಂಪಿ ಅನುಮತಿ ನೀಡಿದ್ದು, ನ. 29ರಿಂದ (ಕೊನೆಯ ಕಾರ್ತಿಕ ಸೋಮವಾರದಂದು) ಒಂದು ವಾರಗಳ ಕಾಲ ಪರಿಷೆ ನಡೆಯಲಿದೆ. ಇನ್ನೂ ಕಡಲೆಕಾಯಿ ಪರಿಷೆಗೆ ಕೋಲಾರ, ಮಾಲೂರು, ಮಾಗಡಿ, ದೊಡ್ಡಬಳ್ಳಾಪುರದ ವಿವಿಧ ಭಾಗಗಳಿಂದ ವಿಶೇಷ ಕಡಲೆಕಾಯಿ ಬರಲಿವೆ.










