ಕಡೂರು ತಾಲೂಕು ಸಂಚಾಲಕರಾಗಿ ಸಂತೋಷ್ ಬಳ್ಳೇಕೆರೆ ಆಯ್ಕೆ…

101
firstsuddi

ಚಿಕ್ಕಮಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಡೂರು ತಾಲೂಕು ಸಂಚಾಲಕರಾಗಿ ಸಂತೋಷ್ ಬಳ್ಳೇಕೆರೆ ಆಯ್ಕೆಯಾಗಿದ್ದಾರೆ.

ಸಂಘಟನಾ ಸಂಚಾಲಕರಾಗಿ ಜಗದೀಶ್, ಸುರೇಶ್, ಕಾಂತರಾಜ್, ಬಸವರಾಜ್, ಕುಮಾರ್, ಕಂಚುಗಪ್ಪ, ಲೋಕೇಶ್, ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.

ಖಜಾಂಚಿಯಾಗಿ ಚಂದ್ರಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ತಮ್ಮಯ್ಯ ಆಯ್ಕೆಯಾದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಿ.ಎನ್. ಚೌಡಪ್ಪ ಅವರ ಅಧ್ಯಕ್ಷತೆಯಲ್ಲಿ ಕಡೂರಿನ ಪ್ರವಾಸಿ ಮಂದಿರದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳಾದ ಲಕ್ಷ್ಮಣ, ಮಲ್ಲಿಕಾರ್ಜುನ, ರಂಗಪ್ಪ, ಶಿವಣ್ಣ, ಪ್ರದೀಪ್, ನಾರಾಯಣ ಮೂರ್ತಿ ಸಭೆಯಲ್ಲಿ ಪಾಲ್ಗೊಂಡಿದ್ದರು.