ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಸಿ.ಆರ್.ಪಿ.ಎಫ್ ಯೋಧ ಹುತಾತ್ಮ…

166
firstsuddi

ಬಾಗಲಕೋಟೆ : ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಸಿ.ಆರ್.ಪಿ.ಎಫ್ ಯೋಧರೊಬ್ಬರು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಗ್ರಾಮದ ಗಿರಿಯಪ್ಪ ಕಿರಸೂರ(29) ಹುತಾತ್ಮ ಯೋಧ. ಗಿರಿಯಪ್ಪ ಅವರು 2012ರಲ್ಲಿ ಸಿ.ಆರ್.ಪಿ.ಎಫ್ ನಲ್ಲಿ ನೇಮಕಗೊಂಡಿದ್ದು, ಬಿಹಾರದ ಬೆಟಾಲಿಯನ್ 224ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪಾಟ್ನಾದಲ್ಲಿ ವಿಐಪಿಗಳಿಗೆ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.