ಕರ್ತವ್ಯದ ವೇಳೆ ನಿದ್ರೆಯಲ್ಲಿದ್ದ ಇಬ್ಬರು ಕಾನ್ಸ್​ಟೇಬಲ್ ಗಳು ಅಮಾನತು…

54
firstsuddi

ಬೆಂಗಳೂರು: ಕರ್ತವ್ಯದ ವೇಳೆ ನಿದ್ರೆಯಲ್ಲಿದ್ದ ಇಬ್ಬರು ಕಾನ್ಸ್​ಟೇಬಲ್ ಗಳನ್ನು ಅಮಾನತುಗೊಳಿಸಿ ವೈಟ್​​ಫೀಲ್ಡ್ ಡಿಸಿಪಿ ಎಸ್.ಗಿರೀಶ್ ಆದೇಶ ಹೊರಡಿಸಿದ್ದಾರೆ.

ಮಹದೇವಪುರ ಪೊಲೀಸ್ ಠಾಣೆ ಕಾನ್ಸ್​ಟೇಬಲ್ ಈರಪ್ಪ ಉಂಡು, ಹೆಡ್ ಕಾನ್ಸ್​ಟೇಬಲ್ ಎ.ಎನ್.ಜಯರಾಮ್ ಅಮಾನತುಗೊಂಡವರು. ಡಿಸಿಪಿ ಗಸ್ತು ವೇಳೆ ನಿದ್ರೆಯಲ್ಲಿದ್ದ ಮಹದೇವಪುರ ಠಾಣೆಯ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.

ಕಾನ್ಸ್​ಟೇಬಲ್ ಈರಪ್ಪ ಉಂಡು, ಹೆಡ್ ಕಾನ್ಸ್​ಟೇಬಲ್ ಎ.ಎನ್.ಜಯರಾಮ್ ರಾತ್ರಿ ಪಾಳಿಯಲ್ಲಿದ್ದರು. ಆಗ ರಾತ್ರಿ ಗಸ್ತಿನಲ್ಲಿದ್ದ ಸಿಎಆರ್ ಡಿಸಿಪಿ ಅವರು, ಮಹದೇವಪುರ ಠಾಣೆಗೆ ತೆರಳಿದ್ದರು. ಆ ವೇಳೆ ಇಬ್ಬರು ಪೊಲೀಸರು ನಿದ್ರೆ ಮಾಡುತ್ತಿದ್ದನ್ನು ಗಮನಿಸಿದ ಸಿಎಆರ್ ಡಿಸಿಪಿ ಅವರು, ಮರುದಿನ ವೈಟ್​​ಫೀಲ್ಡ್ ವಿಭಾಗದ ಡಿಸಿಪಿ ಅವರಿಗೆ ವರದಿ ನೀಡಿದ್ದರು. ನಗರ ಸಶಸ್ತ್ರ ಪಡೆ ಡಿಸಿಪಿ ವರದಿ ಆಧರಿಸಿ ಕಾನ್ಸ್​ಟೇಬಲ್ ಗಳ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.