ಕಲಬುರಗಿ : ಹಾಡಹಗಲೇ ನಗರಸಭೆ ಅಧ್ಯಕ್ಷೆ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಹಬಾದ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಗಿರೀಶ್ ಕಂಬನೂರ್ (42) ಕೊಲೆಯಾದ ವ್ಯಕ್ತಿ.
ಶಹಬಾದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಲು ಬಂದಾಗ ಗಿರೀಶ್ ನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಲ್ಲದೇ, ಮಾರಕಾಸ್ತ್ರಗಳನ್ನು ದೇಹದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಗಿರೀಶ್ ಕಂಬನೂರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ 2 ವರ್ಷದ ಹಿಂದೆ ಗಿರೀಶ್ ಸಹೋದರ ಸತೀಶ್ ಕಂಬನೂರ್ ಹತ್ಯೆಯಾಗಿತ್ತು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಈ ಕುರಿತು ಶಹಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.










