ಕಳಸ : ಕಾರ್ಗದ್ದೆ ಗ್ರಾಮದಲ್ಲಿ ರಸ್ತೆಗೆ ಗುಡ್ಡ ಕುಸಿತ, ಕಳಸ-ಮಂಗಳೂರು ಸಂಚಾರ ಬಂದ್…

302
firstsuddi

ಕಳಸ : ಮಲೆನಾಡು ಭಾಗದಲ್ಲಿ ಬಾರಿ ಮಳೆಯಿಂದಾಗಿ ರಸ್ತೆಗೆ ಗುಡ್ಡ ಕುಸಿದು ಬಿದ್ದಿರುವ ಘಟನೆ ತಾಲ್ಲೂಕಿನ ಕಾರ್ಗದ್ದೆ ಗ್ರಾಮದಲ್ಲಿ ನಡೆದಿದ್ದು, ಗುಡ್ಡ ಕುಸಿದ ಪರಿಣಾಮ ಕಳಸ-ಮಂಗಳೂರು ಸಂಚಾರ ಬಂದ್ ಮಾಡಲಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಳಸ ಹಾಗೂ ಸಂಸೆ ಭಾಗದಲ್ಲಿ ಬಾರಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹೊರನಾಡಿನ ಎರಡು ಸಂಚಾರಿ ಮಾರ್ಗಗಳನ್ನು ಬಂದ್ ಮಾಡಲಾಗಿದೆ.