ಕಳಸ ಜೆಸಿಐ ತಂಡ ರಚಿಸಿದ ಜಂಜಾಟ ಕಿರು ಚಿತ್ರಕ್ಕೆ ಪ್ರಥಮ ಸ್ಥಾನ…

306
firstsuddi

ಕಳಸ: ಕಳಸ ಜೆಸಿಐ ತಂಡ ರಚಿಸಿದ ಜಂಜಾಟ ಕಿರು ಚಿತ್ರಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಸೋಮವಾರಪೇಟೆ ಪುಷ್ಪಗಿರಿ ಜೆಸಿಐ ನಡೆಸಿದ ನಾಯಕಿ ಕಾರ್ಯಕ್ರಮದಲ್ಲಿ ಕಿರು ಚಿತ್ರಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಇದರಲ್ಲಿ ಕಳಸ ಜೆಸಿಐ ಪ್ರಥಮ ಸ್ಥಾನ ಹಾಗೂ ಬಣಕಲ್ ವಿಸ್ಮಯ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಭಾನುವಾರ ಸೋಮವಾರ ಪೇಟೆಯಲ್ಲಿ ನಡೆದ ನಾಯಕಿ ಕಾರ್ಯಕ್ರಮದಲ್ಲಿ ಜೆಸಿಐ ವಲಯಾಧ್ಯಕ್ಷ ಜೆಫಿನ್ ಜಾಯ್ ಈ ಪ್ರಶಸ್ತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಕಳಸ ಜೆಸಿಐ ಅಧ್ಯಕ್ಷ ಪ್ರಕಾಶ್ ಕುಮಾರ್,ಪೂರ್ವಧ್ಯಕ್ಷ ಚಂದ್ರಪ್ಪ,ಸೋಮವಾರಪೇಟೆ ಜೆಸಿಐಯ ಅದ್ಯಕ್ಷ ಪುರುಷೋತ್ತಮ,ಮಾಯಾಗಿರೀಶ್ ಇದ್ದರು.
ಜಂಜಾಟ ಚಿತ್ರದ ಕಥೆ ಮತ್ತು ನಿರ್ಧೇಶವನ್ನು ಅಶೋಕ್ ಜಾವಳಿ ಮಾಡಿದರು.ಚಿತ್ರದಲ್ಲಿ ಕೆ.ಸಿ.ಮಹೇಶ್,ತೇಜಸ್ವಿನಿ,ಪ್ರಕಾಶ್ ಕುಮಾರ್,ಜಯಂತ್ ಇತರರು ಅಭಿನಯಿಸಿದ್ದರು.ಸುದೀಶ್ ಮತ್ತು ಜಯಂತ್ ಛಾಯಗ್ರಹಣ ಮಾಡಿದ್ದರು.