ಬಣಕಲ್: ವೃತಿ ನಿಷ್ಟೆಯಿಂದ ಕಾರ್ಯ ನಿರ್ವಹಿಸಿದರೇ ಸರ್ವಾಂಗೀಣ ಅಭಿವೃದ್ದಿ ಸಾಧ್ಯವಿದ್ದು ಸಾಮಾಜಿಕ ಏಳಿಗೆಯೂ ಸಾಧ್ಯವಾಗುತ್ತದೆ ಎಂದು ವೃತ್ತ ನಿರೀಕ್ಷಕ ರಘು ಹೇಳಿದರು.
ಬಣಕಲ್ ಪೊಲೀಸ್ ಠಾಣೆಯಲ್ಲಿ ನಡೆದ ಪೋಲಿಸ್ ಸಿಬ್ಬಂದಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾಹಣೆಗೊಂಡ ನಂತರವೂ ಕೆಲ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ನೆನಪಿನಲ್ಲಿ ಉಳಿದಿರುತ್ತದೆ. ಸದಾ ಸಾರ್ವಜನಿಕರ ಜೊತೆಗೆ ಇರುವ ಪೋಲಿಸರದ್ದು ವೃತ್ತಿಯ ಜೊತೆಗೆ ಸೇವೆಯನ್ನು ಮಾಡುವ ಕಾರ್ಯವಾಗಿದೆ ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕರಾದ ಸುನೀಲ್ ಪಾಟೀಲ್ ಮಾತನಾಡಿ ಪೋಲಿಸರು ಸಾರ್ವಜನಿಕರ ಜೀವನದ ಜೊತೆಗೆ ಸಾಂಸಾರೀಕ ಜೀವನವನ್ನು ಉತ್ತಮವಾಗಿಟ್ಟುಕೊಳ್ಳಿ. ವೃತ್ತಿಯ ಒತ್ತಡದಿಂದ ಕುಟುಂಬದವರೊಂದಿಗೆ ಕಾಲ ಕಳೆಯುವುದು ಕಡಿಮೆ ಮಾಡಬೇಡಿ. ಪೋಲಿಸ್ ವೃತ್ತಿಯಲ್ಲಿ ತೊಡಗಿಕೊಂಡು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಸಾಧ್ಯವಿದ್ದು ಸಿಬ್ಬಂದಿಗಳ ಆ ನಿಟ್ಟಿನಲ್ಲಿ ಗಮನ ಹರಿಸಿ ಎಂದರು.
ಹೆಡ್ ಕಾನ್ಸ್ಟೇಬಲ್ ಮೋಹನ್‍ಕುಮಾರ್ ಮಾತನಾಡಿ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ನಮ್ಮ ಪೂರ್ವ ಜನ್ಮದ ಪುಣ್ಯ ವೃತ್ತಿಯ ಜೊತೆಜೊತೆಗೆ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಸಾದ್ಯವಿದ್ದು ಪೋಲಿಸ್ ಸಿಬ್ಬಂದಿಗಳು ಪ್ರವೃತ್ತಿಯನ್ನು ಬೆಳೆಸಿಕೊಂಡರೇ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ವರ್ಗಾವಣೆಗೊಂಡ ಪೋಲಿಸ್ ಸಿಬ್ಬಂದಿಗಳಾದ ಮೋಹನ್‍ಕುಮಾರ್, ಯೋಗೇಶ್, ರುದ್ರೇಶ್, ಸಂತೋಷ್, ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಗ್ರಾ.ಪಂ ಸದಸ್ಯೆ ದಿಲ್‍ದಾರ್ ಬೇಗಂ, ಎಎಸ್‍ಐಗಳಾದ ಸಣ್ಣತಿಮ್ಮಪ್ಪ, ಶಶಿ, ಮೂಡಿಗೆರೆ ವೃತ್ತ ನಿರೀಕ್ಷಕ ಕಚೇರಿಯ ಸಿಬ್ಬಂದಿಗಳಾದ ಮಂಜುನಾಥ್, ಗಿರೀಶ್, ರವೀಂದ್ರ, ಬಣಕಲ್ ಠಾಣೆಯ ಸಿಬ್ಬಂದಿಗಳಾದ ಬಾಬು, ಸಚ್ಚಿನ್, ಮಾಲತೇಶ್, ಶೇಖರ್, ಮೆಹಬೂಬ್, ಪೌಸಿ, ಲಕ್ಷ್ಮಣ್, ಮುಂತಾದವರು ಇದ್ದರು.











