ನಾವು ದಾಳಿ ನಡೆಸಿರುವುದು ಸತ್ಯ, ಏರ್ ಸ್ಟ್ರೈಕ್ ದಾಳಿಯ ಅನುಭವವನ್ನು ಹಂಚಿಕೊಂಡ ಪೈಲೆಟ್‍ಗಳು…

200
firstsuddi

ಗ್ವಾಲಿಯರ್ : ಭಾರತೀಯ ಸೈನಿಕರನ್ನು ಗುರಿಯಾಗಿಸಿ ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಆತ್ಮಹುತಿ ಬಾಂಬನ್ನು ಸಿಡಿಸಿ 40 ಸಿ ಆರ್ ಪಿ ಎಫ್ ಯೋಧರು ಹುತಾತ್ಮರಾಗಿದ್ದರು. ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಫೆಬ್ರವರಿ 26ರಂದು ಭಾರತೀಯ ಸೇನಾ ವಾಯುಪಡೆಗಳು ಏರ್ ಸ್ಟ್ರೈಕ್ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದು, ಏರ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದ ಇಬ್ಬರು ಮಿರಾಜ್ 2000 ಯುದ್ಧ ವಿಮಾನದ ಪೈಲೆಟ್‍ಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
1971 ರ ಬಳಿಕ ಮೊದಲ ಬಾರಿಗೆ ಭಾರತೀಯ ವಾಯುಸೇನೆ ಬಾಲಾಕೋಟ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಈ ದಾಳಿಗೆ “ಆಪರೇಷನ್ ಬಂದರ್” ಎಂಬ ಕೋಡ್ ವರ್ಡ್ ನೀಡಲಾಗಿತ್ತು. ನಾವು ಏರ್ ಸ್ಟ್ರೈಕ್ ಗೂ ಮುನ್ನ ಅದೆಷ್ಟು ಸಿಗರೇಟ್ ಸೇದಿದಿವೋ ಲೆಕ್ಕಕ್ಕೆ ಇಲ್ಲ. ಈ ಯೋಜನೆಯ ಬಗ್ಗೆ ತಿಳಿದ ನಮಗೆ ಆಗುತ್ತಿದ್ದ ಚಡಪಡಿಕೆ ಹೇಳಲು ಸಾಧ್ಯವಿಲ್ಲ. ನಾವು ದಾಳಿಯಲ್ಲಿ ಗುರಿಯಿಟ್ಟ ಪ್ರದೇಶಕ್ಕೆ ನಿಖರವಾಗಿ ತಲುಪಿ ಧ್ವಂಸಗೊಳಿಸುವ ಸ್ಪೈಸ್ 2000 ಬಾಂಬನ್ನು ದಾಳಿಯಲ್ಲಿ ಬಳಸಲಾಗಿತ್ತು. ದಾಳಿ ನಡೆಸುವ ದಿನ ಮೋಡಗಳು ತೀರಾ ಕೆಳಗೆ ಇದ್ದ ಕಾರಣ ಸ್ವಲ್ಪ ತಡೆಯುಂಟಾಗಿತ್ತು. ನಾವು ದಾಳಿಗಾಗೆ ಒಟ್ಟು 6 ಬಾಂಬ್‍ನ್ನು ತೆಗೆದುಕೊಂಡು ಹೋಗಿದ್ದು, ಅದರಲ್ಲಿ 5 ಬಾಂಬನ್ನು ಬಳಸಿದ್ದೆವು. ನಾವು ದಾಳಿ ನಡೆಸಿದ ಸ್ಪೈಸ್ 2000 ಬಾಂಬ್ ಗುರಿ ತಲುಪ್ಪಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಸ್ಪೈಸ್ 2000 ಬಾಂಬ್ ಯಾವುದೇ ಕಾರಣಕ್ಕೂ ಗುರಿ ತಪ್ಪುವುದಿಲ್ಲ. ನಾವು ದಾಳಿ ನಡೆಸಿರುವುದು ಸತ್ಯ, ಆದರೆ ದಾಳಿಯಲ್ಲಿ ಧ್ವಂಸವಾದ ಕಟ್ಟಡಗಳನ್ನು ಮರೆಮಾಚುವ ಕೆಲಸವನ್ನು ಮಾಡಿದ್ದಾರೆ ಎಂದು ಪೈಲೆಟ್‍ಗಳು ತಿಳಿಸಿದ್ದಾರೆ.