ಕಳಸ : ಬೃಹತ್ ಗಾತ್ರದ ಹೆಬ್ಬಾವೊಂದನ್ನು ಕಳಸ ಉರಗ ಪ್ರೇಮಿ ರಿಜ್ವಾನ್ ಸೆರೆ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಇಲ್ಲಿನ ಮುಜೆಖಾನ್ ಎಂಬಲ್ಲಿ ನಡೆದಿದೆ.
ಮುಜೆಖಾನ್ ಎಂಬಲ್ಲಿ ಹಿರಿಯರೊಬ್ಬರು ಸೊಪ್ಪು ಹೊಂದಿಸಲು ಹೋಗಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಆಹಾರಕ್ಕಾಗಿ ಕಸಕಡ್ಡಿಗಳನ್ನು ತನ್ನ ಮೈಮೇಲೆ ಹಾಕಿಕೊಂಡು ಹೊಂಚುಹಾಕಿ ಕುಳಿತಿತ್ತು. ಇದನ್ನು ಗಮನಿಸಿದ ಅವರು ಕೂಡಲೇ ಕಳಸ ಅರಣ್ಯ ಇಲಾಖೆಯ ಗಮನಕ್ಕೆ ತಂದು ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರಿಜ್ವಾನ್ ಹೆಬ್ಬಾವನ್ನು ಹಿಡಿದು ನಂತರ ಕುದುರೆಮುಖ ಅಭಯಾರಣ್ಯದಲ್ಲಿ ಬಿಟ್ಟಿದ್ದಾರೆ.
ಕಳಸ ಬಾಗದಲ್ಲಿ ಇಷ್ಟೊಂದು ಬೃಹತ್ ಗಾತ್ರದ ಹೆಬ್ಬಾವು ಕಾಣ ಸಿಕ್ಕಿದ್ದು ಇದು ಪ್ರಥಮ ಬಾರಿಯಾಗಿದೆ ಸುಮಾರು ಹದಿನಾಲ್ಕು ಅಡಿ ಉದ್ದ ಇರಬಹುದು ಎಂದು ಅರಣ್ಯ ರಕ್ಷಕ ಶಂಕರ್ ಹೇಳುತ್ತಾರೆ.










