ಕಳಸ : ಕಳಸ ಹೋಬಳಿ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿದ್ದ ತೋಟದೂರು ಶ್ರೀನಿವಾಸ್ ಹೆಬ್ಬಾರ್(54) ಕೊರೋನ ಸೋಂಕು ತುತ್ತಾಗಿ ಬಲಿಯಾಗಿದ್ದಾರೆ.
ಒಂದು ತಿಂಗಳ ಹಿಂದೆ ಕೊರೋನ ಸೋಂಕು ಪಾಸಿಟೀವ್ ಬಂದ ಹಿನ್ನಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮದ್ಯಾಹ್ನ ಮೃತರಾಗಿದ್ದಾರೆ.
ಕಳೆದ 50 ದಿನದ ಹಿಂದೆಯಷ್ಟೆ ಅವರ ತಂದೆ ಶ್ಯಾಮಣ್ಣ ವಯೋಸಹಜ ಕಾಯಿಲೆಯಿಂದ ಮೃತರಾಗಿದ್ದರು.
ಶ್ರೀನಿವಾಸ್ ಹೆಬ್ಬಾರ್ ಪ್ರಸ್ತುತ ಕಳಸ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿ ರೋಟರಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಮತ್ತು ಧಾರ್ಮಿಕ ಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್ತು, ಕ್ರೀಡಾ ಕ್ಷೇತ್ರ ಹಾಗೂ ದಾನಿಗಳು ಆಗಿದ್ದರು.
ಇವರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಶ್ರೀನಿವಾಸ್ ಹೆಬ್ಬಾರ್ ನಿಧನಕ್ಕೆ ಮಾಜಿ ಸಚಿವೆ ಮೋಟಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್. ಮೂಡಿಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಜಿ.ಸುರೇಂದ್ರ, ಮಾಜಿ ಅಧ್ಯಕ್ಷ ಯು.ಹೆಚ್.ಹೇಮಶೇಖರ, ಮಾಜಿ ಜಿ.ಪಂ ಸದಸ್ಯ ಎಂ.ಎಸ್.ಅನಂತ್, ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಬಿ.ರಮೇಶ್, ಕಳಸ ಯೂತ್ ಕಾಂಗ್ರೇಸ್ ಅಧ್ಯಕ್ಷ ವೀರೇಂದ್ರ ಸಂತಾಪ ಸೂಚಿಸಿದ್ದಾರೆ.










