ಕಳಸ : ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಹತ್ತನೇ ದಿನವಾದ ವಿಜಯದಶಮಿಯನ್ನು ತೆಂಗಿನ ಕಾಯಿಗೆ ಕೋವಿಯಿಂದ ಗುರಿ ಇಟ್ಟು ಹೊಡೆಯುವುದರ ಮೂಲಕ ಆಚರಿಸಲಾಯಿತು.
ಕಳೆದ ಒಂಬತ್ತು ದಿನಗಳಿಂದ ಅನ್ನಪೂರ್ಣೇಶ್ವರಿಯನ್ನು ದೇವಿಯ ಒಂಬತ್ತು ರೂಪಗಳಿಂದ ಅಲಂಕಾರ ಮಾಡಿ ಪೂಜಿಸಲಾಯಿತು.ನವರಾತ್ರಿಯ ಹತ್ತನೇ ದಿನವನ್ನು ವಿಜಯೋತ್ಸವನ್ನು ಆಚರಿಸಲಾಯಿತು..ಹೆಚ್ಚಿನ ಕಡೆ ರಾವಣನ ಪ್ರತಿಕೃತಿಯನ್ನು ಮಾಡಿ ನಂತರ ಸುಟ್ಟು ಹಾಕುವ ಕಾರ್ಯಕ್ರಮವಿದೆ.ಆದರೆ ಇಲ್ಲಿ ಅದರ ಪ್ರತೀಕವಾಗಿ ದೇವಸ್ಥಾನದಲ್ಲಿ ಕೋವಿಗಳನ್ನು ಇಟ್ಟು ಪೂೀಜೆ ಮಾಡಿ ನಂತರ ನೂರಾರು ಭಕ್ತರು ಹಾಗೂ ದೇವಸ್ಥಾನದ ಧರ್ಮಕರ್ತರಾದ ಡಾ|ಜಿ.ಭೀಮೇಶ್ವರ ಜೋಷಿ ಕುಟುಂಬ ಪರಿವಾರ ಸಹಿತ ಪೂಜಿಸಲ್ಪಟ್ಟ ಕೋವಿಯನ್ನು ದೇವಸ್ಥಾನದ ಮುಖ್ಯ ರಸ್ತೆಯ ಮುಖಾಂತರ ವಾದ್ಯಗೋಷ್ಟಿಗಳೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು.ಇಲ್ಲಿ ರಕ್ಷಣೆಗೆಂದು ದೂರಲ್ಲಿ ಮರಳಿನ ಮೂಟೆಯನ್ನು ಜೋಡಿಸಿಟ್ಟು ಅದರ ಮದ್ಯೆ ತೆಂಗಿನ ಕಾಯಿಯನ್ನು ಇಟ್ಟು ನಂತರ ಭೀಮೇಶ್ವರ ಜೋಷಿ ಸೇರಿದಂತೆ ಕುಟುಂಬ ಸಹಿತ ಆ ಕಾಯಿಗೆ ಗುರಿ ಇಟ್ಟು ಹೊಡೆಯುವುದರ ಮುಖಾಂತರ ವಿಜಯೋತ್ಸವವನ್ನು ಆಚರಿಸಲಾಯಿತು.
ಇದು ಒಂದೆಡೆ ಸಂಪ್ರಾದಾಯಿಕವಾದರೂ ಕೂಡ ಇನ್ನೊಂದೆಡೆ ದೇವಸ್ಥಾನದಲ್ಲಿರುವ ಕೋವಿಗಳಿಂದ ಜೋಷಿ ಕುಟುಂಬವು ತಾಮುಂದು ತಾಮುಂದು ಎಂಬಂತೆ ತೆಂಗಿನಕಾಯಿಗೆ ಗುರಿ ಇಟ್ಟು ಹೊಡೆದುರುಳಿಸಿ ಸಂಭ್ರಮಪಟ್ಟರು.
Home ಸ್ಥಳಿಯ ಸುದ್ದಿ ಕಳಸ : ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕಾಯಿಗೆ ಕೋವಿಯಿಂದ ಗುರಿ ಇಟ್ಟು ಹೊಡೆಯುವ ಮೂಲಕ ವಿಜಯದಶಮಿ...










