ಕಳಸ : ಒಂದು ಸ್ಥಳದ ಇತಿಹಾಸ, ಸಾಂಸ್ಕೃತಿಕ ವಿಚಾರಗಳನ್ನು ಅಳಿಯದಂತೆ ಬೆಳೆಸುವ ಮತ್ತು ಐತಿಹಾಸಿಕ ದಾಖಲೆಗಳನ್ನು ಉಳಿಸುವ ಪ್ರಯತ್ನ ನಮ್ಮದಾಗಬೇಕು. ಎಂದು ಐತಿಹಾಸಿಕ ಸಂಶೋದಕಿ ಕು|ಡಾ| ಕೆ.ಎನ್ ಸುಪ್ರಿತ ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ತು ಕಳಸ ಹೋಬಳಿ ಘಟಕದಿಂದ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಕಳಸ ತಾಲ್ಲೂಕು ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಕುರಿತು ದತ್ತಿ ಉಪನ್ಯಾಸ ನೀಡಿದ ಅವರು, ಕಳಸ ತಾಲ್ಲೂಕು ತನ್ನದೇಯಾದ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡ ಪ್ರದೇಶ. ಭೌಗೋಳಿಕವಾಗಿ ಭದ್ರಾನದಿಯು ದಕ್ಷಿಣ, ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ಹರಿಯುತ್ತದೆ. ಇದನ್ನು ಎತ್ತರದ ಸ್ಥಳದಿಂದ ವೀಕ್ಷಿಸಿದಾಗ ಒಂದು ಕುಂಭ ಅಥವಾ ಕಳಸದಂತೆ ಗೋಚರಿಸುವಕಾರಣಕ್ಕೆ ಕಳಸ ಎಂದು ಕರೆಯುತ್ತಾರೆ. ಭದ್ರಾ ತಟದಲ್ಲಿ ಇರುವ ಪಂಚತೀರ್ಥಗಳು ಕೂಡ ಪುರಾಣ ಪ್ರಸಿದ್ದಿ ಸ್ಥಳಗಳಾಗಿವೆ. ಪುರಾಣಗಳ ಹಿನ್ನೆಲೆಯಲ್ಲಿ ನೋಡುವುದಾದರೆ ಅಗಸ್ತ್ಯರು ಕಳಶದಲ್ಲಿ ಜನಿಸಿದರಿಂದ ಈ ಹೆಸರು ಬಂದಿರುವುದಾಗಿದೆ. ಕಳಸದ ಪ್ರಾಚೀನತೆಯನ್ನು ನೋಡುವುದಾದರೆ ಪಾಂಡವರ ಉಪ್ಪರಿಗೆಯಲ್ಲಿ ಬೃಹತ್ ಶಿಲಾಸಂಸ್ಕøತಿ ಯುಗಕ್ಕೆ ಸಂಬಂಧಿಸಿದ ಸಮಾಧಿಗಳು ಮತ್ತು ಅಳಿಗುಳಿ ಮನೆಯಾಟದ ರಚನೆಯನ್ನು ಹಾಸು ಬಂಡೆಗಳ ಮೇಲೆ ಕಾಣಬಹುದು. ಇನ್ನು ಲಿಖಿತ ಆಕರಗಳನ್ನು ನೋಡುವುದಾದರೆ ಕ್ರಿ. ಶ. 1154ರ ಶಾಸನ ಮೊದಲಾಗಿದ್ದು 11 ಮತ್ತು 12ನೇ ಶತಮಾನದಿಂದ 19ನೇ ಶತಮಾನದವರೆಗೂ ಸುಮಾರು 70ಕ್ಕೂ ಹೆಚ್ಚು ಶಾಸನಗಳು ದಾಖಲೆಗಳಾಗಿ ದೊರೆತಿದ್ದು, ಕಳಸದ ಇತಿಹಾಸವನ್ನು ತಿಳಿಸುವಲ್ಲಿ ಸಹಾಯಕವಾಗಿವೆ.
ಕಳಸದಲ್ಲಿ ಪ್ರತಿ ವರ್ಷ ನಡೆಯುವ ಗಿರಿಜಾಕಲ್ಯಾಣವು ಪುರಾಣ ಪ್ರಸಿದ್ಧಿಯಾಗಿದೆ. ಕಾಶಿ ವಿಶ್ವೇಶ್ವರನ ದರ್ಶನಗಿಂತ ಕಳಸದ ಕ¯ಸೇಶ್ವರನ ದರ್ಶನ ಮಾಡುವುದರಿಂದ ಒಂದು ಕಾಳು ಗು¯ಗಂಜಿಯಷ್ಟು ಹೆಚ್ಚಿನ ಪುಣ್ಯ ದೊರೆಯುತ್ತದೆ ಎಂಬುದನ್ನು ಕಲಶೇಶ್ವರ ದೇವಾ¯ಯದಲ್ಲಿ ಇರುವ ಧ್ವಾರಪಾ¯ಕನ ಕೈಯಲ್ಲಿ ತೋರಿಸಿರುವುದು ಶಿಲ್ಪಿಯ ಕೈಚಳಕವನ್ನು ತೊರಿಸುತ್ತದೆ. ಕಳಸದ ಕುರಿತು ಕೆಳದಿ ನೃಪವಿಜಯ, ಶಿವತತ್ವರತ್ನಾಕರ ಕೃತಿಗಳಲ್ಲಿ ಉಲ್ಲೇಖವಿರುವುದನ್ನು ಕಾಣಬಹುದು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷ ಅಶೋಕ್ ಕುಂದೂರು ಕನ್ನಡ ಬಾಷೆ ಒಂದು ಶಕ್ತಿಯಾಗಿ ಬೆಳೆದಿದೆ. ಕನ್ನಡ ಅನ್ನ ಕೊಡುವ ಬಾಷೆ ಅದನ್ನು ನಾವು ಬಳಸಿಕೊಳ್ಳಬೇಕು. ನಮ್ಮ ಸಾದನೆಯ ಮುಖಾಂತರ ಕನ್ನಡದ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಮನಸ್ಸುಗಳನ್ನು ಬೆಸೆಯುವ ಬಾಷೆ ಕನ್ನಡವಾಗಿದೆ ಎಂದು ಹೇಳಿದರು.
ಕೇಂದ್ರ ಮೀನುಗಾರಿಕಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ದೀಪಕ್ ದೊಡ್ಡಯ್ಯ ಮಾತನಾಡಿ ಕನ್ನಡ ಬಾಷೆ ಉಳಿಸಿ ಬೆಳೆಸುವುದರ ಮೂಲಕ ನಾಡು ನುಡಿ ಉಳಿಸುವಲ್ಲಿ ಸರ್ವರೂ ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸ ಹೋಬಳಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಬಾಷೆಯಲ್ಲಿ 125 ಅಂಕ ಪಡೆದ ವಿವಿದ ಶಾಲೆಗಳ 12 ಮಕ್ಕಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಳಸ ಹೋಬಳಿ ಅಧ್ಯಕ್ಷ ನರೇಂದ್ರ ಕಲ್ಲಾನೆ,ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಬಣಕಲ್ ಅಧ್ಯಕ್ಷ ವಸಂತ್ ಹಾರ್ಗೋಡ್, ಕಳಸ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಕರೀಂ, ಅ.ರಾ.ರಾಧಕೃಷ್ಣ, ಬ್ರಹ್ಮದೇವ್, ಬಕ್ಕಿ ಮಂಜುನಾಥ್, ಲಕ್ಷ್ಮಣ ಗೌಡ, ಸುದೀಶ್ ಸುವರ್ಣ, ಡಾ|ಮೋಹನ್ ರಾಜಣ್ಣ, ಕು|ಸುರಭಿ ಜೈನ್ ಇದ್ದರು.
Home ಸ್ಥಳಿಯ ಸುದ್ದಿ ಕಳಸ : ಸಾಂಸ್ಕೃತಿಕ ವಿಚಾರಗಳನ್ನು ಅಳಿಯದಂತೆ ಬೆಳೆಸುವ ಪ್ರಯತ್ನ ನಮ್ಮದಾಗಬೇಕು : ಕು |ಡಾ| ಕೆ.ಎನ್...










