ಕಾಂಗ್ರೆಸ್‍ನಲ್ಲಿ 10 ಮಂದಿಗೆ ಸಿಎಂ ಆಗುವ ಆಸೆ ಇದೆ, ಅವರಲ್ಲಿ ನಾನೂ ಒಬ್ಬ : ಜಿ.ಪರಮೇಶ್ವರ್

64
firstsuddi

ತುಮಕೂರು : ಕಾಂಗ್ರೆಸ್ ನಲ್ಲಿ 10 ಜನ ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ನಾನೂ ಒಬ್ಬ ಎಂದು ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮಧುಗಿರಿಯಲ್ಲಿ ನಿಮಗೆ ಸಿಎಂ ಆಗುವ ಆಸೆ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯಕ್ಕೆ ಬರುವುದು ಯಾಕೆ ಹೇಳಿ? ಅಧಿಕಾರ ಹಿಡಿಯೋಕೆ ತಾನೇ? ಎಲ್ಲರಿಗೂ ಸಿಎಂ ಆಗುವ ಆಸೆ ಇದ್ದೇ ಇರುತ್ತದೆ. ನಮ್ಮ ಪಕ್ಷದಲ್ಲಿ ಒಂದು ಹತ್ತು ಜನರಿಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಅದರಲ್ಲಿ ನಾನೂ ಒಬ್ಬ. ನಮ್ಮಲ್ಲಿ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಮಾಡುವುದಿಲ್ಲ. ನಮ್ಮಲ್ಲಿ ಆಯಾ ಸಂದರ್ಭದಲ್ಲಿ ಯಾರು ಸಮರ್ಥರಿದ್ದಾರೆ ಅಂತಹವರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಆಕಸ್ಮಿಕವಾಗಿ ಆ ಸಂದರ್ಭದಲ್ಲಿ ಆ ಜಾತಿಯವರು ಆದರೆ ಏನು ಮಾಡಲೂ ಆಗುವುದಿಲ್ಲ ಎಂದು ಹೇಳಿದರು.