ಕಾಂಗ್ರೆಸ್ ಪಾರ್ಟಿಯ ಅಪ್ಪಂದಿರ ಮನೆಯಿಂದ ಸರ್ಕಾರ ಅನುದಾನ ಕೊಡುತ್ತಿಲ್ಲ; ಪ್ರಿಯಾಂಕ್ ಖರ್ಗೆ ವಿರುದ್ಧ ಅಶೋಕ್ ಕಿಡಿ.

31

ಬೆಂಗಳೂರು: ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿರೋ ಹತ್ತು ಕೋಟಿ ರೂಪಾಯಿ ಹಣವನ್ನು ಬಿಜೆಪಿ ಶಾಸಕರು ವಾಪಸ್ ಕೊಡಲಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ವಿಪಕ್ಷ ನಾಯಕ ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಸಕರಿಗೆ ಕೊಟ್ಟಿರೋ ಅನುದಾನ ಯಾಕೆ ವಾಪಸ್ ಕೊಡಬೇಕು. ಅನುದಾನ ವಾಪಸ್ ಕೊಡೋಕೆ ಅದು ಅವರಪ್ಪನ ಮನೆ ಆಸ್ತಿಯಲ್ಲ. ಕಾಂಗ್ರೆಸ್ ಪಕ್ಷ ಅವರಪ್ಪನ ಮನೆಯಿಂದ ಅವರು ಅನುದಾನ ಕೊಡುತ್ತಿಲ್ಲ. 6.5 ಕೋಟಿ ರೂಪಾಯಿ ಕರ್ನಾಟಕ ಜನರ ಅಪ್ಪಂದಿರ ಆಸ್ತಿ ಇದು. ನಾವು ಟ್ಯಾಕ್ಸ್ ಕಟ್ಟುತ್ತಿದ್ದೇವೆ. ನಾವು ಯಾಕೆ ವಾಪಸ್ ಕೊಡೋಣ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಬಸವರಾಜ ಬೊಮ್ಮಾಯಿ ಇದ್ದಾಗ ಎಷ್ಟು ಹಣ ಬಿಡುಗಡೆ ಮಾಡಿದ್ದರು ಎಂದು ಕಾಂಗ್ರೆಸ್‍ನವರು ಮೊದಲು ನೋಡಲಿ. ಇದು ಪಾಪರ್ ಸರ್ಕಾರ. ಸರ್ಕಾರ ಕೂಡಲೇ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸಬೇಕು ಎಂದು ಸವಾಲ್ ಹಾಕಿದ್ದಾರೆ. ಕಾಂಗ್ರೆಸ್‍ನವರು ಮನೆ ಹಾಳರು, ಅವರೇ ಸಾಲ ಮಾಡಿದ್ದು. ಈಗ ನಮ್ಮ ಮೇಲೆ ಹೇಳುತ್ತಾರೆ. ಅರವತ್ತು ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ಮಾಡಿತ್ತು. ಆಗ ಸಾಲ ಮಾಡಿರಲಿಲ್ಲವಾ. ಕಾಂಗ್ರೆಸ್ 60 ವರ್ಷಗಳ ಅಂಕಿಅಂಶಗಳನ್ನ ಬಿಡುಗಡೆ ಮಾಡಿ. ನಾವು ಒಂಬತ್ತು ವರ್ಷಗಳ ಅಂಕಿಅಂಶಗಳನ್ನ ಬಿಡುಗಡೆ ಮಾಡುತ್ತೀವಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಅಶೋಕ್ ಕಿಡಿಕಾರಿದರು.