ತೆಲಂಗಾಣ ಜನರ ಕ್ಷಮೆ ಕೇಳಿದ ನಿರ್ಮಾಪಕ ದಿಲ್ ರಾಜು.

37

ದಶಕಗಳಿಂದಲೂ ತೆಲುಗು ಚಿತ್ರರಂಗದ ಸ್ಟಾರ್ ನಿರ್ಮಾಪಕ ಎನಿಸಿಕೊಂಡಿರುವ ದಿಲ್ ರಾಜು, ತೆಲಂಗಾಣ ಜನರ ಕ್ಷಮೆ ಕೇಳಿದ್ದಾರೆ. ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾ ನಿರ್ಮಾಣ ಮಾಡಿರುವ ದಿಲ್ ರಾಜು, ತೆಲುಗು ಚಿತ್ರರಂಗದ ಸೆಲೆಬ್ರಿಟಿ ನಿರ್ಮಾಪಕ. ಹಲವು ಸಿನಿಮಾ ಕಾರ್ಯಕ್ರಮಗಳಿಗೆ ಅತಿಥಿಯಾಗಿ ದಿಲ್ ರಾಜು ಭಾಗವಹಿಸುತ್ತಿರುತ್ತಾರೆ. ಇತ್ತೀಚೆಗೆ ಸಂಕ್ರಾಂತಿಕಿ ವಸ್ತುನ್ನಾಮ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದಿಲ್ ರಾಜು, ವೇದಿಕೆ ಮೇಲೆ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದವು. ಅದರ ಕುರಿತಂತೆ ದಿಲ್ ರಾಜು ಕ್ಷಮೆ ಕೇಳಿದ್ದಾರೆ. ವಿಕ್ಟರಿ ವೆಂಕಟೇಶ್ ನಟನೆಯ ಸಂಕ್ರಾಂತಿಕಿ ವಸ್ತುನ್ನಾಮ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ತೆಲಂಗಾಣದ ನಿಜಾಮಾಬಾದ್‍ನಲ್ಲಿ ನಡೆದಿತ್ತು. ದಿಲ್ ರಾಜು ಸಹ ಇದೇ ಊರಿನವರಾಗಿದ್ದು ಮಾತ್ರವೇ ಅಲ್ಲದೆ ಆ ಭಾಗದ ಸಿನಿಮಾ ವಿತರಣೆಯನ್ನು ಅವರೇ ಖರೀದಿ ಮಾಡಿದ್ದರು. ಇದೇ ಕಾರಣಕ್ಕೆ ದಿಲ್ ರಾಜು ಅವರನ್ನು ಸಿನಿಮಾದ ಪ್ರೀ ರಿಲೀಸ್ ಇವೆಂಟ್‍ಗೆ ಆಹ್ವಾನಿಸಲಾಗಿತ್ತು. ವೇದಿಕೆ ಮೇಲೆ ಮಾತು ಆರಂಭಿಸಿದ ದಿಲ್ ರಾಜು, ಆಂಧ್ರದ ಕೆಲ ನಗರಗಳಲ್ಲಿ ಸಿನಿಮಾ ಕಾರ್ಯಕ್ರಮಕ್ಕೆ ಹೊದಾಗ ಅಲ್ಲಿ ಒಂದು ವೈಬ್ ಕೊಡುತ್ತಾರೆ, ಸಿನಿಮಾ ವಾತಾವರಣ ಸೃಷ್ಟಿ ಮಾಡುತ್ತಾರೆ. ಆದರೆ ತೆಲಂಗಾಣದ ಜನ ಹಾಗಲ್ಲ ಇಲ್ಲಿನವರಿಗೆ ನೀರಾ ಮತ್ತು ಮಟನ್ ಪೀಸ್ ಇದ್ದರೆ ಸಾಕು ಎಂದು ತಮಾಷೆಯಾಗಿ ಹೇಳಿದ್ದರು. ಆದರೆ ದಿಲ್ ರಾಜು ಅವರ ಈ ಮಾತು ವಿವಾದಕ್ಕೆ ಕಾರಣವಾಗಿತ್ತು. ದಿಲ್ ರಾಜು ಅವರ ಈ ಹೇಳಿಕೆಯನ್ನು ಹಲವರು ಖಂಡಿಸಿದ್ದರು. ದಿಲ್ ರಾಜು, ತೆಲಂಗಾಣ ಜನರ ಸಂಸ್ಕøತಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದ್ದರಿಂದ ತೆಲಂಗಾಣ ಜನರ ಕ್ಷಮೆ ಕೇಳಿದ್ದಾರೆ.