ಕಾಡುಪ್ರಾಣಿಗಳ ಸಂತತಿಗೆ ಅರಣ್ಯದಲ್ಲಿ ಸ್ಥಳ ಬೇಕು.

26

ಮೈಸೂರು: ಕಾಡುಪ್ರಾಣಿಗಳು ಹಾಗೂ ಮಾನವನ ಸಂಘರ್ಷ ಇವಾಗಿನದಲ್ಲ. ಚರಿತ್ರೆ ಹಾಗೂ ಇತಿಹಾಸ ತೆರೆದು ನೋಡಿದರೆ ಇದರ ಬಗ್ಗೆ ತಿಳಿಯುತ್ತದೆ. ಆದರೆ, ಇತ್ತೀಚೆಗೆ ಕಾಡುಪ್ರಾಣಿಗಳು ನಾಡಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ವರದಿಗಳು ನಮಗೆ ಬಹುಬೇಗ ತಿಳಿಯುತ್ತದೆ. ಖ್ಯಾತ ವನ್ಯಜೀವಿ ಕೃಪಾಕರ್ ಅದಕ್ಕೆ ಬಲವಾದ ಕಾರಣವೂ ಇದೆ ಎಂದು ಹೇಳುತ್ತಾರೆ. ಕಾಡುಪ್ರದೇಶ ನಗರವಾಗಿ ಪರಿವರ್ತನೆಯಾಗುತ್ತಿದೆ. ಈ ಹಿಂದೆ ಕಾಡು ಎಷ್ಟಿತ್ತು, ಇವಾಗ ಎಷ್ಟಿದೆ ಎಂಬುದು ತಿಳಿದಿರುವುದೇ. ಕಾಡುಪ್ರಾಣಿಗಳು ಆಹಾರ ಹುಡುಕಿಕೊಂಡು ಬಂದಾಗ ಈ ರೀತಿಯ ಸಂಘರ್ಷಗಳು ನಡೆಯುತ್ತವೆ. ಇದಕ್ಕೆ ಪರಿಹಾರ ಕಷ್ಟ. ಗ್ರಾಮಕ್ಕೆ ಚಿರತೆ ಬಂತು, ಆನೆ ಬಂತು ಎಂಬ ವರದಿಗಳು ಮಾಧ್ಯಮಗಳಲ್ಲಿ ಹೆಚ್ಚು ಬರುತ್ತಿರುವುದರಿಂದ ಹಾಗೂ ಕಾಡುಪ್ರಾಣಿ ಹಾಗೂ ಮಾನವನ ಸಂಘರ್ಷ ಕುರಿತು ಮಾಧ್ಯಮಗಳು ಹೆಚ್ಚು ಕೇಂದ್ರೀಕರಿಸುತ್ತಿರುವುದರಿಂದ ಇದು ಹೆಚ್ಚಾಗಿಯೇ ಕೇಳಿಬರುತ್ತಿದೆ. ಹಾಗಯೇ ಅದು ಸತ್ಯ ಕೂಡ ಹೌದು ಎಂದು ಹೇಳಿದರು. ಮತ್ತೋಬ್ಬ ವನ್ಯಜೀವಿ ತಜ್ಞ ಸೇನಾನಿ ಮಾತನಾಡಿ, ಯಾವುದೇ ವನ್ಯಜೀವಿಯ ಸಂಕುಲ ವಿಸ್ತರಿಸಬೇಕು. ಇದು ಪ್ರಾಣಿಗಳ ಸಹಜ ಸ್ವಭಾವ. ಆದರೆ, ಮನುಷ್ಯರು ಅರಣ್ಯಕ್ಕೆ ಗಡಿ ನಿರ್ಮಿಸಿ ಇಷ್ಟೇ ನಿಮ್ಮ ಸ್ಥಳವೆಂದು ಪ್ರಾಣಿಗಳಿಗೆ ಕಾಡಿನ ಅಳತೆಯನ್ನು ಕಡಿಮೆ ಮಾಡುತ್ತಿದ್ದಾರೆ. ನಗರಾಭಿವೃದ್ಧಿ ಹೆಸರಿನಲ್ಲಿ ದಿನದಿಂದ ದಿನಕ್ಕೆ ನಾಡು ಕಾಡಿನತ್ತ ಸಾಗುತ್ತಿದೆ. ಕಾಡುಪ್ರಾಣಿಗಳ ಸಂತತಿ ಬೆಳೆಯಲು ಕಾಡಿನಲ್ಲಿ ಬೇರೆ ಜಾಗಗಳು ಬೇಕು. ಆದರೆ, ಈಗ ಅದು ಇಲ್ಲ. ಹೀಗಾಗಿ ಅವುಗಳು ನಾಡಿಗೆ ಬರುತ್ತವೆ ಎಂದು ತಿಳಿಸದರು.