ಕಾಡು ಪ್ರಾಣಿಯ ದಾಳಿಗೆ ಬಲಿಯಾದ ರೈತ…

100
firstsuddi

ಮಂಡ್ಯ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ನೊಬ್ಬ ಕಾಡು ಪ್ರಾಣಿಯ ದಾಳಿಗೆ ಬಲಿಯಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನೆಲಮನೆ ಗ್ರಾಮದಲ್ಲಿ ನಡೆದಿದೆ.

ರಾಮೇಗೌಡ (65)ಮೃತ ರೈತ. ರಾಮೇಗೌಡ ತನ್ನ ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದ ವೇಳೆ ಕಾಡು ಪ್ರಾಣಿಯೊಂದು ದಾಳಿ ನಡೆಸಿ ಹೊಟ್ಟೆಯನ್ನು ಬಗೆದು ಸಾಯಿಸಿದೆ. ರಾಮೇಗೌಡ ಎಷ್ಟು ಹೊತ್ತದರೂ ಜಮೀನಿನಿಂದ ಮನೆಗೆ ಬಾರದ ಹಿನ್ನಲೆ ಭಯಗೊಂಡ ಮನೆಯವರು ಜಮೀನಿಗೆ ಹೋಗಿ ನೋಡಿದಾಗ ರಾಮೇಗೌಡ ಸಾವನ್ನಪ್ಪಿರುವುದು ತಿಳಿದುಬಂದಿದೆ.

ರಾಮೇಗೌಡರನ್ನು ಸಾಯಿಸಿರುವುದು ಯಾವ ಪ್ರಾಣಿಯೆಂದು ತಿಳಿದುಬಂದಿಲ್ಲ. ಆದರೆ ಹಲ್ಲೆ ಮಾಡಿರುವ ರೀತಿ ನೋಡಿದರೆ ಚಿರತೆ ಅಥವಾ ಕಾಡು ಹಂದಿ ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.