ಕಾಬೂಲ್ ನಲ್ಲಿ ಸರಣಿ ಬಾಂಬ್ ಸ್ಫೋಟ ; ದಾಳಿಯ ಹೊಣೆ ಹೊತ್ತ ಐಸಿಸ್-ಕೆ ಸಂಘಟನೆ…

73
firstsuddi

ಕಾಬೂಲ್ : ತಾಲಿಬಾನ್ ಕೈವಶದಲ್ಲಿರುವ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಆತ್ಮಾಹುತಿ ದಾಳಿಗಳಿಂದ ತತ್ತರಿಸಿದೆ. ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ನಿನ್ನೆ ಸಂಭವಿಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 60 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಕಾಬೂಲ್ ಆತ್ಮಾಹುತಿ ದಾಳಿಯನ್ನು ಅಮೆರಿಕ ಖಚಿತಪಡಿಸಿದ್ದು, ದಾಳಿಯಲ್ಲಿ ಯುಎಸ್ ನ 12 ಸೇನಾ ಸಿಬ್ಬಂದಿ ಮೃತಪಟ್ಟಿದ್ದು, 15 ಸಿಬ್ಬಂದಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ 140 ಕ್ಕೂ ಹೆಚ್ಚು ಅಫ್ಘನ್ನರು ಗಾಯಗೊಂಡಿದ್ದಾರೆ.

ಮೃತರ ದೇಹಗಳು ಛಿದ್ರ-ಛಿದ್ರವಾಗಿವೆ. ಎಲ್ಲೆಲ್ಲೂ ಆಕ್ರಂದನ ಮುಗಿಲುಮುಟ್ಟಿದೆ. ಅಫ್ಘನ್ ತೊರೆಯಲು ಮುಂದಾದವರ ಮೇಲೆ ಭಯೋತ್ಪಾದಕ ದಾಳಿಗಳು ನಡೆಯುವ ಸಂಭವ ಇದೆ. ಕೂಡಲೇ ಸುರಕ್ಷಿತ ಪ್ರಾಂತ್ಯಗಳಿಗೆ ಜನತೆ ತೆರಳಬೇಕೆಂದು ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಎಚ್ಚರಿಕೆ ನೀಡಿತ್ತು. ಎಚ್ಚರಿಕೆ ನೀಡಿತ್ತು. ಆದರೆ ಅಷ್ಟರಲ್ಲೇ ಐಸಿಸ್-ಕೆ ಉಗ್ರರು ಈ ಭಯಾನಕ ದಾಳಿ ನಡೆಸಿದ್ದಾರೆ.

ಅಘ್ಘಾನಿಸ್ತಾನದಲ್ಲಿ ರಕ್ತದಕೋಡಿ ಹರಿಸಿದ್ದು ನಾವೇ ಎಂದು ಐಸಿಸ್-ಕೆ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಜಿಹಾದಿ ಸಂಘಟನೆಗಳಲ್ಲೇ ಅತೀ ಕ್ರೂರವಾದ ಸಂಘಟನೆಯಾಗಿ ಗುರುತಿಸಿಕೊಂಡಿರುವ ಐಸಿಸ್-ಕೆ ತಾಲಿಬಾನ್ ಮತ್ತು ಅಮೆರಿಕ ಸೇನೆಯನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಿರುವುದು ಸ್ಪಷ್ಟವಾಗಿದೆ.