ವಾಷಿಂಗ್ಟನ್ : ನಿಮ್ಮನ್ನು ಸುಮ್ಮನೆ ಬಿಡುವ ಅಥವಾ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಐಸಿಸಿ-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗಿದ್ದಾರೆ.
ಬಾಂಬ್ ದಾಳಿ ಮಾಡಿ ಅಮೆರಿಕನ್ನರ ಸಾವಿಗೆ ಕಾರಣವಾದ ಸಂಘಟನೆಯ ವಿರುದ್ಧ ದಾಳಿ ಮಾಡುತ್ತೇವೆ. ನಾವು ಇದನ್ನು ಕ್ಷಮಿಸಲ್ಲ. ಜೊತೆಗೆ ಇದನ್ನು ಮರೆಯುವುದೂ ಇಲ್ಲ. ನಿಮ್ಮನ್ನು ಬೇಟೆಯಾಡಿ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಐಸಿಸ್ ಭಯೋತ್ಪಾದಕರು ಗೆಲ್ಲಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶಪಥ ಮಾಡಿದ್ದಾರೆ.










