ಲಂಡನ್ : ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿದ್ದ ಕಾಮನ್ವೆಲ್ತ್ ಗೇಮ್ಸ್ 2022ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಭಾರತೀಯ ಕಾಲ ಮಾನದ ಪ್ರಕಾರ ಸೋಮವಾರ ತಡರಾತ್ರಿ ಕ್ರೀಡಾಕೂಟ ಮುಕ್ತಾಯಗೊಂಡಿದ್ದು, ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನಗಳನ್ನು ನೀಡಿ ಒಟ್ಟು 61 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.
ಭಾರತವು ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳೊಂದಿಗೆ ಒಟ್ಟು 61 ಪದಕಗಳನ್ನು ಗೆದ್ದಿದೆ. ಇವುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ವೇಟ್ಲಿಫ್ಟಿಂಗ್:
ಜೆರೆಮಿ ಲಾಲ್ರಿನ್ನುಂಗಾ – ಚಿನ್ನ
ಅಚಿಂತಾ ಶೆಯುಲಿ – ಚಿನ್ನ
ಮೀರಾಬಾಯಿ ಚಾನು – ಚಿನ್ನ
ಬಿಂದ್ಯಾರಾಣಿ ದೇವಿ – ಬೆಳ್ಳಿ
ವಿಕಾಸ್ ಠಾಕೂರ್ – ಬೆಳ್ಳಿ
ಸಂಕೇತ್ ಸರ್ಗರ್ – ಬೆಳ್ಳಿ
ಗುರುದೀಪ್ ಸಿಂಗ್ – ಕಂಚು
ಲವ್ಪ್ರೀತ್ ಸಿಂಗ್ – ಕಂಚು
ಹರ್ಜಿಂದರ್ ಕೌರ್ – ಕಂಚು
ಗುರುರಾಜ ಪೂಜಾರಿ – ಕಂಚು
ಜೂಡೋ:
ತುಲಿಕಾ ಮಾನ್ – ಬೆಳ್ಳಿ
ಸುಶೀಲಾ ದೇವಿ ಲಿಕ್ಮಾಬಮ್ – ಬೆಳ್ಳಿ
ವಿಜಯ್ ಕುಮಾರ್ ಯಾದವ್ – ಕಂಚು
ಬಾಕ್ಸಿಂಗ್:
ಅಮಿತ್ ಪಂಗಲ್ – ಚಿನ್ನ
ನೀತು ಘಂಘಸ್ – ಚಿನ್ನ
ನಿಖತ್ ಜರೀನ್ – ಚಿನ್ನ
ಸಾಗರ್ ಅಹ್ಲಾವತ್ – ಬೆಳ್ಳಿ
ಮೊಹಮ್ಮದ್ ಹುಸಾಮುದ್ದೀನ್ – ಕಂಚು
ಜೈಸ್ಮಿನ್ – ಕಂಚು
ರೋಹಿತ್ ಟೋಕಾಸ್ – ಕಂಚು
ಮಹಿಳಾ ಕ್ರಿಕೆಟ್ – ಬೆಳ್ಳಿ
ಪುರುಷರ ಹಾಕಿ – ಬೆಳ್ಳಿ
ಮಹಿಳಾ ಹಾಕಿ – ಕಂಚು
ಪವರ್ಲಿಫ್ಟಿಂಗ್ : ಸುಧೀರ್ – ಪುರುಷರ ಹೆವಿವೇಟ್ – ಚಿನ್ನ
ಬ್ಯಾಡ್ಮಿಂಟನ್:
ಪಿವಿ ಸಿಂಧು – ಚಿನ್ನ
ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ – ಡಬಲ್ಸ್– ಚಿನ್ನ
ಲಕ್ಷ್ಯ ಸೇನ್– ಚಿನ್ನ
ಬ್ಯಾಡ್ಮಿಂಟನ್ ಮಿಶ್ರ ತಂಡ – ಬೆಳ್ಳಿ
ಕಿಡಂಬಿ ಶ್ರೀಕಾಂತ್ – ಕಂಚು
ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ – ಡಬಲ್ಸ್– ಕಂಚು
ಕುಸ್ತಿ:
ಸಾಕ್ಷಿ ಮಲಿಕ್ – ಚಿನ್ನ
ಬಜರಂಗ್ ಪುನಿಯಾ – ಚಿನ್ನ
ವಿನೇಶ್ ಫೋಗಟ್ – ಚಿನ್ನ
ರವಿ ಕುಮಾರ್ ದಹಿಯಾ – ಚಿನ್ನ
ದೀಪಕ್ ಪುನಿಯಾ – ಚಿನ್ನ
ನವೀನ್ – ಚಿನ್ನ
ಅಂಶು ಮಲಿಕ್ – ಬೆಳ್ಳಿ
ಪೂಜಾ ಸಿಹಾಗ್ – ಕಂಚು
ದಿವ್ಯಾ ಕಕ್ರಾನ್ – ಕಂಚು
ಪೂಜಾ ಗೆಹ್ಲೋಟ್ – ಕಂಚು
ಮೋಹಿತ್ ಗ್ರೆವಾಲ್ – ಕಂಚು
ಟೇಬಲ್ ಟೆನಿಸ್:
ಅಚಂತ ಶರತ್ ಕಮಲ್ – ಚಿನ್ನ
ಭಾವಿನಾ ಪಟೇಲ್ – ಚಿನ್ನ
ಶ್ರೀಜಾ ಅಕುಲಾ ಮತ್ತು ಅಚಂತ ಶರತ್ ಕಮಲ್ – ಮಿಶ್ರ ಡಬಲ್ಸ್ – ಚಿನ್ನ
ಅಚಂತ ಶರತ್ ಕಮಲ್, ಸತ್ಯನ್, ಸನಿಲ್ ಶೆಟ್ಟಿ ಹರ್ಮೀತ್ ದೇಸಾಯಿ – ಪುರುಷರ ತಂಡ – ಚಿನ್ನ
ಅಚಂತ ಮತ್ತು ಸತ್ಯನ್ ಜ್ಞಾನಶೇಖರನ್ – ಡಬಲ್ಸ್ – ಬೆಳ್ಳಿ
ಸೋನಾಲ್ ಪಟೇಲ್ – ಕಂಚು
ಸತ್ಯನ್ ಜ್ಞಾನಶೇಖರನ್ – ಕಂಚು
ಸ್ಕ್ವ್ಯಾಷ್:
ಸೌರವ್ ಘೋಸಲ್ – ಕಂಚು
ದೀಪಿಕಾ ಪಲ್ಲಿಕಲ್ ಕಾರ್ತಿಕ್ ಮತ್ತು ಸೌರವ್ ಘೋಸಲ್ – ಡಬಲ್ಸ್ – ಕಂಚು
ಅಥ್ಲೆಟಿಕ್ಸ್:
ಎಲ್ದೋಸ್ ಪಾಲ್ – ಪುರುಷರ ಟ್ರಿಪಲ್ ಜಂಪ್- ಚಿನ್ನ
ಎಂ ಶ್ರೀಶಂಕರ್ – ಪುರುಷರ ಲಾಂಗ್ ಜಂಪ್ – ಬೆಳ್ಳಿ
ಪ್ರಿಯಾಂಕಾ ಗೋಸ್ವಾಮಿ – ಮಹಿಳೆಯರ 10,000 ಮೀ. ನಡಿಗೆ – ಬೆಳ್ಳಿ
ಅವಿನಾಶ್ ಸಾಬಳೆ– ಪುರುಷರ 3000ಮೀ ಸ್ಟೀಪಲ್ ಚೇಸ್ – ಬೆಳ್ಳಿ
ಅಬ್ದುಲ್ಲಾ ಅಬೂಬಕರ್ – ಪುರುಷರ ಟ್ರಿಪಲ್ ಜಂಪ್ – ಬೆಳ್ಳಿ
ಸಂದೀಪ್ ಕುಮಾರ್ – ಪುರುಷರ 10,000 ಮೀ. ನಡಿಗೆ – ಕಂಚು
ಅಣ್ಣು ರಾಣಿ – ಮಹಿಳೆಯರ ಜಾವೆಲಿನ್ ಥ್ರೋ – ಕಂಚು
ತೇಜಸ್ವಿನ್ ಶಂಕರ್ – ಪುರುಷರ ಹೈ ಜಂಪ್ – ಕಂಚು










