ಕಾರಿಗೆ ಡಿಕ್ಕಿ ಹೊಡೆದು 3 ಕಿ.ಮೀ ಎಳೆದುಕೊಂಡು ಹೋದ ಟ್ರಕ್.

37
firstsuddi

ಲಕ್ನೋ : ಉತ್ತರ ಪ್ರದೇಶದ ಮೀರತ್ ನಲ್ಲಿ ಸಿನಿಮೀಯ ರೀತಿಯ ಆ್ಯಕ್ಷನ್ ಸೀನ್ ವೊಂದು ನಡೆದಿದೆ. ಟ್ರಕ್ ಚಾಲಕನೊಬ್ಬ ಕಾರಿಗೆ ಡಿಕ್ಕಿ ಹೊಡೆದಿದಲ್ಲದೇ ಆ ಕಾರನ್ನು 3 ಕಿಲೋ ಮೀಟರ್ ವರೆಗೆ ಎಳೆದುಕೊಂಡು ಹೋಗಿದ್ದಾನೆ. ಕಾರನ್ನು ಟ್ರಕ್ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ಟ್ರಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಬಳಿಕ ಟ್ರಕ್ 3 ಕಿ.ಮೀ ವರೆಗೆ ಕಾರನ್ನು ದೂಡಿಕೊಂಡೇ ಹೋಗಿದೆ. ಅಪಘಾತದ ವೇಳೆ ಕಾರಿನಲ್ಲಿ 4-5 ಜನರಿದ್ದು, ಅದೃಷ್ಟವಶಾತ್ ಅವರೆಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಟ್ರಕ್ ಕಾರನ್ನು ದೂಡಿಕೊಂಡು ಹೋಗುತ್ತಿದ್ದಾಗ ಅದು ಇನ್ನೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಟ್ರಕ್ ಚಾಲಕ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು, ಆದರೂ ಆತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಟ್ರಕ್ ಚಾಲಕನನ್ನು ಅಮಿತ್ ಎಂದು ಗುರುತಿಸಲಾಗಿದ್ದು, ಆತ ಕುಡಿತ ಮತ್ತಿನಲ್ಲಿ ಗಾಡಿ ಚಲಾಯಿಸಿದರಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.