ಮೈಸೂರು : ಕುಟುಂಬದ ಜೊತೆ ಹೊರ ಹೋಗಿದ್ದ ಸಂದರ್ಭದಲ್ಲಿ ಕಾರಿನ ಟೈರ್ ಪಂಕ್ಚರ್ ಆದ ಕಾರಣ ಸ್ವತಃ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರೇ ಟೈರ್ ಬದಲು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ರೋಹಿಣಿ ಸಿಂಧೂರಿ ಅವರು ಕಾರಿನ ಟೈರ್ ಕಳಚುವ ವೇಳೆ ಸಾರ್ವಜನಿಕರು ಈ ವೀಡಿಯೋ ಮಾಡಿದ್ದು, ತಾವು ರೋಹಿಣಿ ಸಿಂಧೂರಿ ಅಲ್ವಾ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಡಿಸಿ ರೋಹಿಣಿ ಸಿಂಧೂರಿ ಅವರು ನಕ್ಕು ಸುಮ್ಮನಾಗಿದ್ದಾರೆ.










