ಕಾರಿನಲ್ಲಿ ಆಟವಾಡುತ್ತಿದ್ದ ಇಬ್ಬರು ಪುಟ್ಟ ಮಕ್ಕಳು ಉಸಿರುಗಟ್ಟಿ ಸಾವು…

206
firstsuddi

ಮಹಾರಾಷ್ಟ್ರ : ಕಾರಿನಲ್ಲಿ ಆಟವಾಡುತ್ತಿದ್ದ ಇಬ್ಬರು ಪುಟ್ಟ ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ರಾಯಗಢ ಜಿಲ್ಲೆಯ ಮಹಾದ್ ತಾಲ್ಲೂಕಿನ ನಂಗಲ್ವಾಡಿ ಗ್ರಾಮದಲ್ಲಿ ನಡೆದಿದೆ. ಅಬ್ಬಾಸ್ ಖಾನ್(4) ಹಾಗೂ ಸುಹೇಲ್ ಖಾನ್(6) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಮೃತ ಮಕ್ಕಳು ಕಾರಿನಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾರನ್ನು ಲಾಕ್ ಮಾಡಿದ್ದಾರೆ. ಬಳಿಕ ಲಾಕ್ ಓಪನ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದ ಕಾರಣ ಇಬ್ಬರು ಮಕ್ಕಳು ಕಾರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದು, ಬಳಿಕ ಸ್ಥಳೀಯರು ವಿಷಯ ತಿಳಿಯುತ್ತಿದ್ದಂತೆ ಕಾರಿನ ಗಾಜು ಹೊಡೆದು ಮಕ್ಕಳ ಮೃತದೇಹವನ್ನು ಹೊರತೆಗೆದಿದ್ದಾರೆ.