ಕಾರಿನಲ್ಲಿ ಒಬ್ಬರೇ ಪ್ರಯಾಣ ಮಾಡುತ್ತಿದ್ದರೂ ಮಾಸ್ಕ್ ಕಡ್ಡಾಯ : ದೆಹಲಿ ಹೈಕೋರ್ಟ್ ಆದೇಶ…

188
firstsuddi

ನವದೆಹಲಿ : ಕಾರಿನಲ್ಲಿ ಒಬ್ಬರೇ ಪ್ರಯಾಣ ಮಾಡುತ್ತಿದ್ದರೂ ಸಹ ಮಾಸ್ಕ್ ಕಡ್ಡಾಯ ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಮಾಸ್ಕ್ ಧರಿಸದೇ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ವಿಚಾರಣೆ ಬಳಿಕ ದೆಹಲಿ ಹೈಕೋರ್ಟ್ ಮುಖ್ಯ ನಾಯಾಧೀಶ ಪ್ರತಿಭಾ ಎಂ.ಸಿಂಗ್ ಅವರು ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೂ ಕೂಡ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತೀರ್ಪು ನೀಡಿದ್ದಾರೆ.

ಕಾರಿನಲ್ಲಿ ಹೋಗುವಾಗ ಮಧ್ಯೆ ಸಿಗ್ನಲ್ ಬಿದ್ದರೆ ಕಾರನ್ನು ನಿಲ್ಲಿಸುತ್ತೇವೆ. ಆಗ ಕಾರ್ ನ ಗ್ಲಾಸ್ನ್ನು ಕೆಳಗಿಳಿಸಿದಾಗ ಪಕ್ಕದಲ್ಲಿದ್ದವರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಆದರೆ ಕೇಂದ್ರ ಆರೋಗ್ಯ ಸಚಿವಾಲಯ, ಹೈಕೋರ್ಟ್ ನಿಯಮದ ಹೊತಾಗಿಯೂ, ಕಾರಿನಲ್ಲಿ ಒಬ್ಬನೇ ಚಲಾಯಿಸುವ ವ್ಯಕ್ತಿಯು ಮಾಸ್ಕ್ ಧರಿಸುವುದು ಅನಿವಾರ್ಯವಲ್ಲ ಎಂದು ತಿಳಿಸಿದೆ.

ದೆಹಲಿ ಸರ್ಕಾರ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆ ಈ ರೀತಿಯ ಆದೇಶ ಹೊರಡಿಸಿದೆ.